ಚಿರತೆ ದಾಳಿಗೆ ಮೇಕೆಗಳು ಬಲಿ

lepord
Published on

ರಾಮನಗರ : ತಾಲೂಕಿನ ಕೂಟಗಲ್ ಹೋಬಳಿಯ ಬಾಳಲಿಂಗೇಗೌಡನದೊಡ್ಡಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿ 5 ಮೇಕೆಗಳನ್ನು ಸಾಯಿಸಿರುವ ಘಟನೆ ನಡೆದಿದೆ.

ಗ್ರಾಮದ ಸತ್ಯನಾರಾಯಣ ಎಂಬುವರು ಜೀವನೋಪಾಯಕ್ಕೆ ಹಸು ಮತ್ತು ಮೇಕೆಗಳನ್ನು ಸಾಕಿದ್ದರು. ಬುಧವಾರ ಮುಂಜಾವು ಸುಮಾರು ಮೂರುಗಂಟೆ ಸಮಯದಲ್ಲಿ ಚಿರತೆ ಮನೆಯ ಹಿಂಬದಿಯಿಂದ ದನದ ಕೊಟ್ಟಿಗೆ ನುಗ್ಗಿ 5 ಮೇಕೆಗಳನ್ನು ಸಾಯಿಸಿದೆ. 

ಇದರಿಂದಾಗಿ ಅಪಾರ ನಷ್ಟವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ. ಸ್ಥಳಕ್ಕೆ ಉಪ ವಲಯಅರಣ್ಯಾಧಿಕಾರಿ ವಾಸು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶು ವೈದ್ಯರಿಂದ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಲಾುತು.

ಗ್ರಾಮದ ಅಕ್ಕಪಕ್ಕದ ಗುಡ್ಡಗಳಲ್ಲಿಯೇ ಚಿರತೆ ವಾಸಸ್ಥಾನ ಮಾಡಿಕೊಂಡಿದ್ದು ಸಂಜೆಯಾಗುತ್ತಲೇ ಗ್ರಾಮದ ಕಡೆ ಬಂದು ರೈತರ ಸಾಕು ನಾಯಿ, ಕೋಳಿ, ಕುರಿ, ಮೇಕೆ ತಿಂದು ಹಾಕುತ್ತಿದೆ. ಮನೆಯೊಳಗೆ ಬಂದು ಧಾಳಿ ನಡೆಸುತ್ತಿದೆ. ಇದರಿಂದ ಗ್ರಾಮದಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಇದನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net