ನ್ಯಾಯದಾನ ವ್ಯವಸ್ಥೆ ದಿಕ್ಕುತಪ್ಪಿಸುತ್ತಿರುವ ಪಟ್ಟಭದ್ರರು ವಿ. ಹನುಮಂತರಾಜು ಅಸಮಾಧಾನ

Rmgm-Ph-01-Layars Association Manavi DC Office Rmgm ADc -Manavi-16-12-2022
Published on

ರಾಮನಗರ

ವಕೀಲರ ರಕ್ಷಣಾ ಕಾಯ್ದೆಯ ಕರಡು ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ, ಅನುಮೋದಿಸುವಂತೆ ಒತ್ತಾಯಿಸಿ ಜಿಲ್ಲಾ ವಕೀಲರ ಸಂದ ಪದಾಧಿಕಾರಿಗಳು ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಬೈಕ್ ರ್ಯಾಲಿಯಲ್ಲಿ ತೆರಳಿ ವಕೀಲರು  ಮನವಿ ಸಲ್ಲಿಸಿದರು.

ವಕೀಲರ ಸಂದ ಅಧ್ಯಕ್ಷ ವಿ. ಹನುಮಂತರಾಜು ಮಾತನಾಡಿ, ರಾಜ್ಯಾದ್ಯಂತ ವಕೀಲರ ಮೇಲೆ ಹಲ್ಲೆ ಮತ್ತು ದೌರ್ಜನ್ಯಗಳು ಎಡೆಬಿಡದೆ ನಡೆಯುತ್ತಿವೆ. ನ್ಯಾಯಾಂಗ ವ್ಯವಸ್ಥೆಯನ್ನು ರಕ್ಷಣೆ ಮಾಡಬೇಕಾದ ವಕೀಲ ಸಮೂಹದ ಮೇಲೆ ಪಟ್ಟಭದ್ರ ಹಿತಾಸಕ್ತಿಗಳು ನ್ಯಾಯದಾನದ ವ್ಯವಸ್ಥೆಯನ್ನು ದಿಕ್ಕುತಪ್ಪಿಸುತ್ತಿರುವುದು ಸಹ ಕಂಡು ಬರುತ್ತಿದೆ ಎಂದು ಅಸವಾಧಾನ ವ್ಯಕ್ತಪಡಿಸಿದರು.

ಕೆಲವು ಸರ್ಕಾರಿ ಅಧಿಕಾರಿಗಳು ಸಹ ಸರ್ಕಾರದ ಅಧಿಕಾರದ ನೆಪದಲ್ಲಿ ವಕೀಲರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಜತೆಗೆ ಪೊಲೀಸ್ ವ್ಯವಸ್ಥೆ ಸಹ ವಕೀಲರ ರಕ್ಷಣೆ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದ್ದು, ರಾಷ್ಟ್ರ ಮತ್ತು ರಾಜ್ಯದಲ್ಲಿ ವಕೀಲರ ಹಿತರಕ್ಷಣೆ ಮಾಡುವುದು ಅಗತ್ಯವಾಗಿದೆ. ಕೂಡಲೇ ರಾಜ್ಯ ಸರ್ಕಾರ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಿ ವಕೀಲರ ಹಿತ ಕಾಯಬೇಕೆಂದು ಒತ್ತಾಯಿಸಿದರು.

ಜಿಲ್ಲಾ ವಕೀಲರ ಸಂದ ಕಾರ್ಯದರ್ಶಿ ಅಶೋಕ್, ಉಪಾಧ್ಯಕ್ಷ ಎಂ.ಜಿ. ಮಹೇಶ್, ಖಜಾಂಚಿ ಎಸ್. ನಂಜೇಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಸ್ವಾಮಿ, ಬಿ. ಮಂಜುನಾಥ, ವಿಷಕಂಠಯ್ಯ ಎಂ.ಎಸ್, ನವೀನ್‌ಕುವಾರ್ ಆರ್.ಎಸ್, ವೆಂಕಟರಮಣ ವಿ, ಹರೀಶ್ ಎಂ.ಕೆ. ಕೋಮಲ, ಆರ್. ವರಲಕ್ಷ್ಮಿ, ವಕೀಲರಾದ ಲೋಕೇಶ್, ಅಂಬರೀಶ್, ತಿಮ್ಮೇಗೌಡ ಮುಂತಾದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net