ಇದ್ದಕ್ಕಿದ್ದಂತೆ ಮಹಿಳೆ ಖಾತೆಯಿಂದ ಹಣ ಕಡಿತ

cyber crime
Published on

ರಾಮನಗರ:  ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ಹಣ ಇದ್ದಕ್ಕಿದ್ದಂತೆ ಕಡಿತವಾಗಿರುವ ಪ್ರಕರಣ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.

ನಗರದ ಐಜೂರು ನಿವಾಸಿ ವಾಣಿಶ್ರೀ ಹಣ ಕಳೆದುಕೊಂಡವರು. ವಾಣಿಶ್ರೀ ಮತ್ತು ಅವರ ತಾಯಿ ಬೇರೆ ಬ್ಯಾಂಕ್‌ಗಳಲ್ಲಿ 3 ಖಾತೆಗಳನ್ನು ಹೊಂದಿದ್ದು, ಎಲ್ಲ ಖಾತೆಗಳನ್ನು ವಾಣಿಶ್ರೀ ಅವರೇ ನಿರ್ವಹಿಸುತ್ತಿದ್ದರು. ಆ.21ರಂದು ಅವರ ಮೊಬೈಲ್‌ಗೆ ನಿಮ್ಮ ಬ್ಯಾಂಕ್ ಖಾತೆ ಫ್ರೀಜ್ ಆಗಿದೆ ಎನ್ನುವ ಸಂದೇಶ ಬಂದ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ತೆರಳಿ ವಿಚಾರಿಸಿದ್ದಾರೆ.

ಈ ವೇಳೆ ಸರ್ವರ್ ಸಮಸ್ಯೆ ಇದೆ ಎಂದು ಸಿಬ್ಬಂದಿ ಹೇಳಿ ಕಳುಹಿಸಿದ್ದಾರೆ. ಸಂಜೆ ಮತ್ತೊಮ್ಮೆ ಖಾತೆ ಪರಿಶೀಲನೆ ಮಾಡಲಾಗಿ ಇವರ ಒಂದು ಖಾತೆಯಿಂದ 64000 ರೂ., ಮತ್ತೊಂದು ಖಾತೆಯಿಂದ 104500 ರೂ. ಹಾಗೂ ಇವರ ತಾಯಿ ಖಾತೆಯಿಂದ 8 ಸಾವಿರ ರೂ. ಒಟ್ಟು 1,76,500 ರೂ. ಹಣ ಕಡಿತವಾಗಿದೆ. ಈ ಸಂಬಂಧ ವಾಣಿಶ್ರೀ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net