

ಕನಕಪುರ: ವಿದ್ಯುತ್ ಶಾಕ್‌ನಿಂದ ಪ್ಲಾಸ್ಟಿಕ್ ಹಗೂ ಚಿಂದಿ ಆಯುವ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಗರ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯ ನೂತನ ಕೋರ್ಟ್ ರಸ್ತೆಯಲ್ಲಿ ಸಂಭವಿಸಿದೆ.
30 ವರ್ಷದ ಮೇರಿ ಕರೆಂಟ್ ಶಾಕ್ ಗೆ ಬಲಿಯಾದ ಮಹಿಳೆ. ಮಂಗಳವಾರ ಬೆಳಿಗ್ಗೆ ಸಬ್‌ರಿಜಿಸ್ಟರ್ ಎದುರಿನ ರಸ್ತೆ ಬದಿಯ ಕ್ಯಾಂಟಿನ್‌ನಲ್ಲಿ ಉಪಹಾರ ಸೇವಿಸಿ ನಂತರ ಹಿಂಬದಿಯ ರಸ್ತೆಯಲ್ಲಿನ ಮರದ ಕೆಳಗೆ ಕುಳಿತುಕೊಳ್ಳಲು ತೆರಳುವಾಗ ರಸ್ತೆಯಲ್ಲಿನ ವಿದ್ಯುತ್ ಕಂಬಕ್ಕೆ ಗಿಡಗಂಟೆಗಳು ಮೇಲಿನ ವೈರ್‌ಗೆ ತಾಗಿ ವಿದ್ಯುತ್ ಪ್ರವಹಿಸಿ ಈ ಅವಘಢ ಸಂಭವಿಸಿದೆ.
ಜೊತೆಯಲ್ಲಿದ್ದ ವ್ಯಕ್ತಿ ರಕ್ಷಣೆ ಮಾಡಲು ಯತ್ನಿಸಿದರು ಸಾಧ್ಯವಾಗದೆ ಮಹಿಳೆ ಬಲಿಯಾಗಿದ್ದಾರೆ. ಸ್ಥಳಕ್ಕೆ ಬೆಸ್ಕಾಂನ ಅಧಿಕಾರಿ ಅನಿಲ್‌ಕುಮಾರ್ ಹಾಗೂ ಪೋಲಿಸರು ಭೇಟಿ ನೀಡಿ ಪರಿಶೀಲಿಸಿ ಮೃತ ಶವವನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದ್ದಾರೆ. ನಗರಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.