ಹೆಬ್ಬಾಳ ಅವರೆ-5 ತಳಿ ಪರಿಚಯ ವಿಜ್ಞಾನಿ ರಾಜೇಂದ್ರ ಪ್ರಸಾದ್​ ಮಾಹಿತಿ 90-95 ದಿನಗಳ ಅಲ್ಪಾವಧಿ ಬೆಳೆ

28 RMN-MGD P3
Published on

ಮಾಗಡಿ

ಜಿಲ್ಲೆಯಲ್ಲಿ ಅವರೆ ಬೆಳೆ ಪ್ರಮುಖ ದ್ವಿದಳ ಧಾನ್ಯದ ಬೆಳೆಯಾಗಿದೆ ಎಂದು ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞಾನಿ ಬಿ.ಎಸ್​. ರಾಜೇಂದ್ರ ಪ್ರಸಾದ್​ ತಿಳಿಸಿದರು.

ತಾಲೂಕಿನ ಪೆಮ್ಮನಹಳ್ಳಿಯ ಮಹಾಂತೇಶ್​ ಎಂಬುವರ ಜಮೀನಿನಲ್ಲಿ ಹೊಸ ಅವರೆ ತಳಿಯನ್ನು ಶುಕ್ರವಾರ ಪರಿಚಯಿಸಿ ಮಾತನಾಡಿದರು.

ಅವರೆಕಾಯಿ ಬೆಳೆಯನ್ನು ಸಾಮಾನ್ಯವಾಗಿ ರಾಗಿ ಮತ್ತು ಮುಸುಕಿನ ಜೋಳದ ಜತೆಗೆ ಮಿಶ್ರ ಬೆಳೆಯಾಗಿ ಹಾಗೂ ಏಕ ಬೆಳೆಯಾಗಿಯೂ ಬೆಳೆಯುತ್ತಾರೆ. ಕರ್ನಾಟಕದ ದಣ ಭಾಗಗಳಲ್ಲಿ ಅವರೆಯನ್ನು ದ್ವಿದಳ ಧಾನ್ಯ, ತರಕಾರಿ ಹಾಗೂ ಮೇವಿಗಾಗಿಯೂ ಬೆಳೆಯುತ್ತಾರೆ.

ತಮಿಳುನಾಡು, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಅವರೆ ಬೆಳೆಯು ಜನಪ್ರಿಯವಾಗಿದೆ. ಅವರೆಯ ಉಪಯುಕ್ತತೆಯನ್ನು ಪರಿಗಣಿಸಿ ಹಲವಾರು ವರ್ಷಗಳ ಸಂಶೋಧನೆಯ ಫಲವಾಗಿ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹೆಬ್ಬಾಳ ಅವರೆ&5 (ಎಚ್​ಎ&5) ಎಂಬ ಹೊಸ ತಳಿ ಅಭಿವೃದ್ಧಿಪಡಿಸಿ 2022ರಲ್ಲಿ ಬಿಡುಗಡೆ ಮಾಡಿದೆ ಎಂದರು.

ಈ ಬೆಳೆಯನ್ನು ಮತ್ತಷ್ಟು ಜನರಿಗೆ ಪರಿಚಯ ಮಾಡಲು ಅಖಿಲ ಭಾರತ ಸುಸಂಟಿತ ಸಂಶೋಧನಾ ಪ್ರಾಯೋಜಿತ, ಬೀಜ (ಬೆಳೆಗಳು), ಜಿಕೆವಿಕೆ, ಬೆಂಗಳೂರು ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಬೆಂಗಳೂರು ಕೃಷಿ ವಿವಿ ಸಹ ಸಂಶೋಧನಾ ನಿರ್ದೇಶಕಿ ಎಂ.ಎಸ್​. ಉಮಾ ಮಾತನಾಡಿ, ಕೃಷಿ ವಿವಿ ಹೊಸದಾಗಿ ಬಿಡುಗಡೆ ಮಾಡಿರುವ ತಳಿಗಳು ಮತ್ತು ತಾಂತ್ರಿಕತೆಗಳನ್ನು ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ರೈತರಿಗೆ ಪರಿಚಯಿಸಲಾಗುವುದು. ರೈತರು ಈ ತಾಂತ್ರಿಕತೆಗಳನ್ನು ಅಳವಡಿಸಿಕೊಂಡರೆ ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ತಿಳಿಸಿದರು.

ವಿಶೇಷ ಅಧಿಕಾರಿ ಕೆ.ಮಧುಸೂದನ್​ ಮಾತನಾಡಿ, ಹೆಬ್ಬಾಳ ಅವರೆ-5 ತಳಿಯ ವಿಶೇಷತೆಗಳ ಬಗ್ಗೆ, ರಾಷ್ಟ್ರೀಯ ಬೀಜ ಪ್ರಾಯೋಜನೆಯ ಮಹತ್ವಗಳ ಬಗ್ಗೆ ಹಾಗೂ ಬೀಜೋತ್ಪಾದನೆಯ ಕುರಿತು ರೈತರಿಗೆ ಮಾಹಿತಿ ನೀಡಿದರು.

ಪ್ರತಿ ಎಕರೆಗೆ 10-12 ಕ್ವಿಂಟಾಲ್​ ಇಳುವರಿ

ಎಚ್​ಎ-5 ತಳಿಯನ್ನು ಅಭಿವೃದ್ಧಿಪಡಿಸಿದ ಕೃಷಿ ವಿಶ್ವವಿದ್ಯಾಲಯ ಅನುವಂಶೀಯ ಮತ್ತು ಸಸ್ಯತಳಿಶಾಸ ವಿಭಾಗದ ಪ್ರಾಧ್ಯಾಪಕ ಎಸ್​. ರಮೇಶ್​ ಮಾತನಾಡಿ, ಹೊಸ ಅವರೆ ತಳಿಯು 90-95 ದಿನಗಳ ಅವಧಿಯಲ್ಲಿ ಹಸಿಕಾಯಿ ಕಟಾವಿಗೆ ಬರುವ ಅಲ್ಪಾವಧಿ ತಳಿಯಾಗಿದೆ. ಈ ತಳಿ ಬೇರೆ ತಳಿಗಳಿಂದ ವಿಭಿನ್ನವಾಗಿದ್ದು, ಒಂದೇ ಒಂದು ಬಳ್ಳಿಯನ್ನು ಮುಖ್ಯ ಕಾಂಡದಿಂದ ಪ್ರತಿ ಗಿಡದಲ್ಲಿ ಕಾಣಬಹುದು. ಸೂರ್ಯನ ತಾಪ ಈ ಬೆಳೆಯ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಆದ್ದರಿಂದ ವರ್ಷದ ಎಲ್ಲ ಕಾಲದಲ್ಲಿಯೂ ಬೆಳೆಯಬಹುದು. ಹೂಗಳ ಬಣ್ಣ ಹಸಿರು, ಬಲಿತ ಕಾಯಿಗಳಲ್ಲಿ ತಿಳಿಕಂದು ಬಣ್ಣದ 2-3 ಗುಂಡನೆಯ ಬೀಜಗಳಿದ್ದು ಹಾಗೂ ವಿಶೇಷವಾಗಿ ನಾಟಿ ಅವರೆಗೆ ಇರುವಂತೆ ಸೊಗಡು ಹೊಂದಿದ್ದು, ಕಾಯಿಗಳು ನೋಡಲು ಆಕರ್ಷಕವಾಗಿರುತ್ತವೆ. ಪ್ರತಿ ಎಕರೆಗೆ ಹಸಿಕಾಯಿ 10ರಿಂದ 12 ಕ್ವಿಂಟಾಲ್​ ಹಾಗೂ ಕಾಳು 3ರಿಂದ 4 ಕ್ವಿಂಟಾಲ್​ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ ಎಂದರು.

ಕೃಷಿ ವಿವಿ ಸಹಾಯಕ ಬೀಜೋತ್ಪಾದನಾ ಅಧಿಕಾರಿ ಬಿ.ಬಸವರಾಜು, ಹವಾಮಾನ ತೆ ಶಾಂತ ಬಾಲಗೊಂಡ, ಪೆಮ್ಮನಹಳ್ಳಿ, ಗ್ರಾಪಂ ಸದಸ್ಯರಾದ ಪಿಎಂ. ಹರೀಶ್​, ಮುನಿರಾಜು ಸೇರಿ ಪೆಮ್ಮನಹಳ್ಳಿ ಗ್ರಾಮಸ್ಥರು, ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net