ಯುಧರ್ಮ ತಂಡದಿಂದ ಪರಿಸರ ಸ್ವಚ್ಛತೆ ಕೂನಗಲ್ ಬೆಟ್ಟದ ಆಸುಪಾಸಿನಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳ ಸಂಗ್ರಹ

Kailancha-Ph-001-Kungal Betta - Kasa Sangraha u Darma-Members -16-8-2023
Published on

 ಕೈಲಾಂಚ

ಹೋಬಳಿಯ ಕೂನಗಲ್ ಬೆಟ್ಟದ ಸುತ್ತಮುತ್ತಲ ಪ್ರದೇಶ, ರಸ್ತೆಯ ಆಸುಪಾಸಿನಲ್ಲಿ ಯುಧರ್ಮ ತಂಡದ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿ ಪರಿಸರ ಕಾಳಜಿ ಮೆರೆದರು.

ತಂಡದ ಸದಸ್ಯೆ ಚಿತ್ರಾ ರಾವ್ ಮಾತನಾಡಿ, ಬೆಟ್ಟಕ್ಕೆ ಪ್ರತಿದಿನ ಬರುವ ಪ್ರವಾಸಿಗರು ನೀರಿನ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಇಂತಹ ವಸ್ತುಗಳನ್ನು ಇಂದು ಸಂಗ್ರಹ ಮಾಡಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಿಕೊಡಲಾಗುವುದು ಎಂದರು.

ಪ್ರವಾಸಿ ತಾಣಗಳಿಗೆ ಹೋಗುವವರು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ಚಾರಣಪ್ರಿಯರು ಕೂಡ ಪರಿಸರ ಕಾಳಜಿ ತೋರಬೇಕು. ಬೆಟ್ಟಗುಡ್ಡಗಳು, ಮರಗಿಡಗಳು ಮಳೆಗೆ ಕಾರಣವಾಗಿದ್ದು, ಪ್ರಾಣಿ, ಪಕ್ಷಿ ಸೇರಿ ಎಲ್ಲರಿಗೂ ಅಗತ್ಯವಿರುವ ಸಕಲವನ್ನೂ ನೀಡುತ್ತವೆ. ಇಂತಹ ಸ್ಥಳಗಳಲ್ಲಿ ಪ್ಲಾಸ್ಟಿಕ್ ಘನ ತಾಜ್ಯ ವಸ್ತುಗಳು ಹಾಗೂ ಮದ್ಯಪಾನ ಮಾಡಿ ಖಾಲಿ ಬಾಟಲ್‌ಗಳನ್ನು ಎಸೆಯಲಾಗುತ್ತಿದೆ. ಇದು ಕಾನೂನು ಬಾಹಿರವಾಗಿದೆ ಎಂದರು.

ಸಾಂಸ್ಕೃತಿಕ ಸಂಘಟಕಿ ಕವಿತಾರಾವ್ ಮಾತನಾಡಿ, ಯುಧರ್ಮ ತಂಡದ ಮೂಲಕ ಯುವ ಸಮುದಾಯ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಸದಸ್ಯರಾದ ಯುಕ್ತಾಶ್ರೀ, ತನುಶ್ರೀ, ವಿಕಾಸ್ ರಾವ್, ಪ್ರಜ್ವಲ್ ರಾವ್, ಎಸ್. ಪ್ರೀತಿ , ವರಲಕ್ಷ್ಮೀ, ಲೋಕೇಶ್, ಪಲ್ಲವಿ, ಕೀರ್ತನಾ, ಹರ್ಷಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net