

ಬಿಡದಿ: ಆಶ್ರಮಕ್ಕೆ ಸೇರಿದ ಜಾಗದಲ್ಲಿ ಪೊಲೀಸರು ಅಪಘಾತದ ವಾಹನಗಳನ್ನ ನಿಲ್ಲಿಸುತ್ತಿದ್ದಾರೆ ವಾಹನಗಳನ್ನ ತೆರವು ಮಾಡಿ ಎಂದು ಬಸವ ಗಂಗೋತ್ರಿ ಸ್ವಾಮೀಜಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿರುವ ಘಟನೆ ಕುಂಬಳಗೂಡಿನ ಪೊಲೀಸ್ ಠಾಣೆಯ ಪಕ್ಕದಲ್ಲಿ ನಡೆದಿದೆ.
ಪೊಲೀಸ್ ಠಾಣೆ ಹಿಂಭಾಗದಲ್ಲಿ ಬಸವ ಗಂಗೋತ್ರಿ ಆಶ್ರಮ ವಿದೆ. ಇದಕ್ಕೆ ಆದ 6-7 ಎಕರೆ ಜಮೀನು ಕೂಡ ಇದ್ದು ಪೊಲೀಸ್ ಠಾಣೆ ಪಕ್ಕದಲ್ಲಿ 3 ಗುಂಟೆ ಜಾಗ ಇದೆ. ಈ ಜಾಗದ ವಿಚಾರವಾಗಿ ಪೊಲೀಸರು ಹಾಗೂ ಮಠದ ನಡುವೆ ಸಂಘರ್ಷ ನಡೆಯುತ್ತಿದೆ. ಈ ಜಾಗದಲ್ಲಿ ಪೊಲೀಸರು ಅಪಘಾತವಾದ ವಾಹನಗಳನ್ನ ತಂದು ನಿಲ್ಲಿಸಿದ್ದರು.
ಹಲವು ಬಾರಿ ವಾಹನಗಳನ್ನ ತೆರವು ಮಾಡಿ ಎಂದು ಸ್ವಾಮೀಜಿ ಪೊಲೀಸರಿಗೆ ಮನವಿ ಮಾಡಿದ್ದರು ಯಾವುದೇ ಪ್ರಯೋಜನ ವಾಗಿರಲಿಲ್ಲ. ಹಾಗಾಗಿ ಮಠದ ವತಿಯಿಂದ ಕಳೆದ 4 ದಿನಗಳ ಹಿಂದೆ ಅಪಘಾತ ವಾಹನಗಳನ್ನ ತೆರವು ಮಾಡಿ ಪೊಲೀಸ್ ಠಾಣೆ ಪಕ್ಕಕ್ಕೆ ನಿಲ್ಲಿಸಲಾಗಿತ್ತು.
ಇದೀಗ ಪೊಲೀಸರು ಮತ್ತೆ ಕ್ರೇನ್ ಬಳಸಿ ವಾಹನಗಳನ್ನ ಅದೇ ಜಾಗಕ್ಕೆ ಸ್ಥಳಾಂತರ ಮಾಡುತ್ತಿದ್ದರು. ಹಾಗಾಗಿ ಬಸವ ಗಂಗೋತ್ರಿ ಸ್ವಾಮೀಜಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ವಾಹನಗಳ ಸ್ಥಳಾಂತರ ಮಾಡುವ ಕೆಲಸವನ್ನ ಕೈಬಿಟ್ಟಿದ್ದಾರೆ.