ಚಿನ್ನಾಭರಣ ಕದ್ದವನ ಬಂಧನ ಕುದೂರು ಪೊಲೀಸರ ಕಾರ್ಯಾಚರಣೆ 113 ಗ್ರಾಂ ಒಡವೆ ವಶಕ್ಕೆ

arrest-696x465_20230709000956420.jpg
Published on

ರಾಮನಗರ: ಮಾಗಡಿ ತಾಲೂಕು ಸೋಲೂರು ಹೋಬಳಿಯ ಬಿಟ್ಟಸಂದ್ರ ನಿವಾಸಿ ಶಿಲ್ಪಾ ಎಂಬುವವರ ಮನೆಯಲ್ಲಿ ಜೂ.25ರಂದು ಹಾಡಹಗಲೇ ಚಿನ್ನಾಭರಣ ದೋಚಿದ್ದ ಕಳ್ಳರನ್ನು ಕುದೂರು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಕವಳಿಕೆರೆ ನಿವಾಸಿ ರಘು(37) ಬಂಧಿತ. ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಶಿಲ್ಪಾ ಅವರು ಸಂಜೆ 4ಗಂಟೆ ಸುಮಾರಿಗೆ ಮನೆಯ ಹಿಂಭಾಗದ ಕೊಟ್ಟಿಗೆಯಲ್ಲಿ ಕೆಲಸ ಮಾಡಲು ತೆರಳಿದ್ದ ಸಂದರ್ಭ, ಮನೆಗೆ ನುಗ್ಗಿದ ಕಳ್ಳರು 10ಗ್ರಾಂನ ಕಿವಿ ಓಲೆ, 55ಗ್ರಾಂನ ಲಾಂಗ್ ಸರ, 27ಗ್ರಾಂನ ನೆಕ್ಲೆಸ್, 20 ಗ್ರಾಂನ ಸರ ಕದ್ದಿದ್ದರು. ಸಂಜೆ ಶಿಲ್ಪಾ ಮನೆಗೆ ಬಂದಾಗ ಕಳ್ಳತನವಾಗಿರುವುದು ತಿಳಿದು ಬಂದಿದೆ.

ಕುದೂರು ಠಾಣೆ ವೃತ್ತ ನಿರೀಕ್ಷಕ ಎ.ಪಿ.ಕುಮಾರ್ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕ ಕಾರ್ತಿಕ್ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಠಾಣೆ ಸಿಬ್ಬಂದಿ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದೆ.

ಉಳಿದ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕುದೂರು ಠಾಣೆ ವೃತ್ತ ನಿರೀಕ್ಷಕ ಎ.ಪಿ.ಕುಮಾರ್ ಭಾನುವಾರ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net