

ರಾಮನಗರ: ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಿರ್ವಾಹಕ ಮೃತಪಟ್ಟು ಹಲವಾರು ಮಂದಿ ಗಾಯಗೊಂಡಿರುವ ಘಟನೆ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯ ತಾಲೂಕಿನ ಜಯಪುರ ಗೇಟ್ ಬಳಿ ನಡೆದಿದೆ.
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಅಂಬಾರಿಗೆ ಮುಂದೆ ಹೋಗುತ್ತಿದ್ದ ವಾಹನದಿಂದ ಪ್ಲೈವುಡ್ ಶೀಟ್ ಬಡಿದಿದೆ. ಈ ವೇಳೆ ಚಾಲಕನ ಪಕ್ಕದಲ್ಲಿ ಕುಳಿತಿದ್ದ ನಿರ್ವಾಹಕ ಮೃತಪಟ್ಟಿದ್ದಾರೆ.
ಈ ವೇಳೆ ಬಸ್ ನಿಯಂತ್ರಣ ತಪ್ಪಿದ್ದು, ರಸ್ತೆ ವಿಭಜಕ, ಸರ್ವೀಸ್ ರಸ್ತೆಯನ್ನು ದಾಟಿ ಪಕ್ಕದ ಜಮೀನಿನಲ್ಲಿ ಹೋಗಿ ನಿಂತಿದೆ.
ಇದರಿಂದಾಗಿ ಬಸ್ ನಲ್ಲಿ ಇದ್ದ ಹಲವಾರು ಮಂದಿ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದು ವಿವಿಧ ಆಸ್ಪತ್ರೆ ಗಳಿಗೆ ದಾಖಲು ಮಾಡಿದ್ದಾರೆ.
ಸಂಚಾರ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಹೆದ್ದಾರಿ ಪರಿಶೀಲನೆ ನಡೆಸಿದ ಮರು ದಿನವೇ ಈ ಅಪಘಾತ ಸಂಬಂವಿಸಿದೆ.