ಕಾಮುಕ ಮಲತಂದೆಯಿಂದ ಬಾಲಕಿ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ನಾಪತ್ತೆ ಪ್ರಕರಣಕ್ಕೆ ವಿಚಿತ್ರ ತಿರುವು

Child Rape
Published on

ರಾಮನಗರ: ಶಾಲೆಯೊಂದರಿಂದ ಬಾಲಕಿ ನಾಪತ್ತೆ ಪ್ರಕರಣಕ್ಕೆ ವಿಚಿತ್ರ ತಿರುವು ದೊರೆತಿದ್ದು , ಕಾಮುಕ ಮಲತಂದೆಯ ಲೈಂಗಿಕ ದೌರ್ಜನ್ಯವೇ ಕಾರಣ ಎನ್ನುವುದು ಬೆಳಕಿಗೆ ಬಂದಿದೆ.

ತಾಲೂಕಿನ ಶಾಲೆಯೊಂದರಲ್ಲಿ 6 ನೇ ತರಗತಿ ಓದುತ್ತಿದ್ದ ಬಾಲಕಿ ಇತ್ತೀಚೆಗೆ ನಾಪತ್ತೆ ಆಗಿದ್ದಳು. ಈ ಸಂಬಂದ ಬಾಲಕಿಯ ತಾಯಿ ಮತ್ತು ಮಲತಂದೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಸಿಕೊಂಡಿದ್ದ ಗ್ರಾಮಾಂತರ ಪೊಲೀಸರು ರಾತ್ರಿಯಿಡೀ ಹುಡುಕಾಡಿದ್ದರು. ಬೆಳಿಗ್ಗೆ ಬಾಲಕಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ವಿಚಾರಣೆ ನಡೆಸಿ ಆಕೆಯ ಕುರಿತು ಮಾಹಿತಿ ಕಲೆ ಹಾಕಿದ್ದರು.

ಆದರೆ ಬಾಲಕಿ ತಾನು ಹಿಂದೆ ಕಲಿತಿದ್ದ ಬೆಂಗಳೂರಿನ ಕೋಣನಕುಂಟೆಯ ಶಾಲೆಯ ತನ್ನ ನೆಚ್ಚಿನ ಶಿಕ್ಷಕಿ ಬಳಿಗೆ ಹೋಗಿ ಸೇರಿದ್ದಳು.

ಶಿಕ್ಷಕಿ ಬಳಿ ತಂದೆ ಕೃತ್ಯ ಹೇಳಿದ್ದ ಬಾಲಕಿ: ಕೋಣನಕುಂಟೆಯ ಶಾಲೆಯಲ್ಲಿ ತನ್ನ ನೆಚ್ಚಿನ ಶಿಕ್ಷಕಿಯನ್ನು ಬಾಲಕಿ ಬೇಟಿ ಮಾಡಿ, ಮಲತಂದೆಯಿಂದ ಆಗಿರುವ ದೌರ್ಜನ್ಯವನ್ನು ವಿವರಿಸಿದ್ದಳು. ಕೂಡಲೇ ಈ ವಿಷಯವನ್ನು ಶಿಕ್ಷಕಿ ಮಕ್ಕಳ ರಕ್ಷಣಾ ಘಟಕಕ್ಕೆ ಗಮನಕ್ಕೆ ತಂದಿದ್ದರು. ನಂತರ ಮರುದಿನ ಕೋಣನಕುಂಟೆ ಠಾಣೆಗೆ ದೂರು ಸಹ ನೀಡಲಾಗಿತ್ತು.

ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಕೋಣನಕುಂಟೆ ಪೊಲೀಸರು ಆರೋಪಿ ತಂದೆಯನ್ನು ಹುಡುಕಿಕೊಂಡು ರಾಮನಗರಕ್ಕೆ ಬಂದಿದ್ದರು. ಇದೇ ಸಂದರ್ಭದಲ್ಲಿ ರಾಮನಗರ ಗ್ರಾಮಾಂತರ ಪೊಲೀಸರು ತಂದೆಯ ನೆರವಿನಿಂದ ಬಾಲಕಿ ಹತ್ತೆ ಕಾರ್ಯದಲ್ಲಿ ತೊಡಗಿದ್ದೆವು. ಈ ವೇಳೆ, ಸಿಕ್ಕ ಅವರನ್ನು ವಿಚಾರಿಸಿದಾಗ ತಾವು ಬಂದಿರುವ ಉದ್ದೇಶವನ್ನು ಹೇಳಿದರು. ಬಾಲಕಿ ತಮ್ಮ ವಶದಲ್ಲಿರುವ ಕುರಿತು ತಿಳಿಸಿದರು.

ನಿರಂತರ ಕಿರುಕುಳ:
ವಿಷಯ ಗೊತ್ತಾಗುತ್ತಿದ್ದಂತೆ, ಪೊಲೀಸರು 40 ವರ್ಷದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ತಮಿಳುನಾಡಿನವನಾಗಿದ್ದು, ಬಾಲಕಿ ತಾಯಿ ಆಂಧ್ರಪ್ರದೇಶದವರಾಗಿದ್ದಾರೆ. ಇಬ್ಬರೂ ಕೂಲಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಕೋಣನಕುಂಟೆ, ಬಿಡದಿಯಲ್ಲಿ ಕೆಲ ತಿಂಗಳು ನೆಲೆಸಿದ್ದ ಇಬ್ಬರೂ ಇತ್ತೀಚೆಗೆ ರಾಮನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿದ್ದರು.

ಮೂರನೇ ಗಂಡನಾಗಿದ್ದ ಆರೋಪಿ, ಪತ್ನಿ ಮನೆಯಲ್ಲಿ ಇಲ್ಲದಿದ್ದಾಗ ಪುತ್ರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಇಲ್ಲಿಗೆ ಬಂದಾಗಲೂ ತನ್ನ ಕೃತ್ಯ ಮುಂದುವರಿಸಿದ್ದ. ಆತನ ಕೃತ್ಯಕ್ಕೆ ಬೇಸತ್ತಿದ್ದ ಬಾಲಕಿ ಶಾಲೆ ಮುಗಿಸಿಕೊಂಡು ಮನೆಗೆ ಹೋಗದೆ, ಕೆಎಸ್‌ಆರ್‌ಟಿಸಿ ಬಸ್ ಹತ್ತಿ ಕೋಣನಕುಂಟೆಯಲ್ಲಿ ತಾನು ಓದುತ್ತಿದ್ದ ಶಾಲೆಗೆ ಹೋಗಿದ್ದಳು. ತನ್ನ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ್ದಳ ಎಂದು ಪೊಲೀಸರು ಮಾಹಿತಿ ನೀಡದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net