ಕಷ್ಟ ಪರಿಹಾರ ಮಾಡುವ ನೆಪದಲ್ಲಿ ಚಿನ್ನ ದೋಚಿದ ಖಾವಿಧಾರಿ

Crime
Published on

ರಾಮನಗರ: ಮನೆಯ ಕಷ್ಟ ಪರಿಹಾರ ಮಾಡಲು ಚಿನ್ನಕ್ಕೆ ಪೂಜೆ ಮಾಡಬೇಕು ಹೇಳಿ, ನಂತರ ಯಾಮಾರಿಸಿ ಚಿನ್ನವನ್ನು ಕಳವು ಮಾಡಿರುವ ಘಟನೆ ಕೋಡಿಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯ ಮಲ್ಲಪುರದಲ್ಲಿ ನಡೆದಿದೆ.

ಗ್ರಾಮದ ರತ್ನ ಎನ್ನುವವರ ಮನೆಗೆ ಆ.3ರಂದು ಬೆಳಿಗ್ಗೆಯೇ ಆಗಮಿಸಿದ ಸುಮಾರು 38 ವರ್ಷ ಶಿವ ಎಂಬ ಹೆಸರಿನ ಖಾವಿಧಾರಿ ವ್ಯಕ್ತಿ, ನಿಮ್ಮೆ ಮನೆಗೆ ಹಲವಾರು ವರ್ಷಗಳಿಂದ ಭಿಕ್ಷೆಗೆ ಬರುತ್ತಿದ್ದು, ಭಿಕ್ಷೆ ನೀಡುವಂತೆ ಕೋರಿದ್ದಾನೆ. ಈ ವೇಳೆ ನಿಮ್ಮ ಮನೆಯ ಕಷ್ಟ ಪರಿಹಾರ ಮಾಡಲು ಬಿಳಿ ಬಟ್ಟೆಗೆ ಅಕ್ಕಿ ಹಾಕಿಸಿ, ಅದರೊಳಗೆ ರತ್ನಮ್ಮ ಅವರ ಸುಮಾರು 5 ಗ್ರಾಂ ತೂಕದ ಚಿನ್ನದ ಓಲೆಯನ್ನು ಹಾಕಿ ದಾರದಲ್ಲಿ ಸುತ್ತಿದ್ದಾನೆ. ನಂತರ ಮೂರು ಬಗೆಯ ಹೂವು ತರುವಂತೆ ಹೇಳಿದ್ದು, ಹೂ ತರಲು ರತ್ನಮ್ಮ ಆಚೆ ಹೋದಾಗ ಗಂಟನ್ನು ಬದಲಿಸಿರುವ ವಂಚಕ, ಗಂಟನ್ನು ರತ್ಮಮ್ಮ ಅವರಿಗೆ ನೀಡಿ 25 ದಿನ ಪೂಜೆ ಮಾಡುವಂತೆ ಹೇಳಿದ್ದಾನೆ.

ಈ ವೇಳೆ ರತ್ನಮ್ಮ ಖಾವಿಧಾರಿಯ ನಂಬರ್​ ಕೇಳಲಾಗಿ, ಒಂದು ಸಂಖ್ಯೆಯನ್ನು ನೀಡಿದ್ದು, ನಂತರ ಕಪ್ಪು ಬಣ್ಣದ ಬೈಕ್​ ಒಂದರಲ್ಲಿ ಆತುರದಲ್ಲಿ ಹೊರಟು ಹೋಗಿದ್ದಾನೆ.

ಈತನ ನಡವಳಿಕೆಯಿಂದ ಅನುಮಾನಗೊಂಡು ರತ್ನಮ್ಮ ಆತ ಕೊಟ್ಟ ಮೊಬೈಲ್​ ನಂಬರ್​ಗೆ ಕರೆ ಮಾಡಿದ್ದು, ಈ ವೇಳೆ ಮಹಿಳೆಯೊಬ್ಬರು ಕರೆ ಸ್ವೀಕಾರ ಮಾಡಿ ಖಾವಿದಾರಿಯ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಂತರ ಗಂಟು ಬಿಚ್ಚಿ ನೋಡಿದಾಗ ಓಲೆಯನ್ನು ತೆಗೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ. ರತ್ನಮ್ಮ ಈ ಸಂಬಂಧ ಭಾನುವಾರ ಕೋಡಿಹಳ್ಳಿ ಠಾಣೆಗೆ ದೂರು ದಾಖಲಿಸಿದ್ದಾರೆ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net