ಕಾರ್ಗಿಲ್​ ವಿಜಯ್​ ದಿವಸ್​ ಅಂಗವಾಗಿ ರಕ್ತದಾನ ಶಿಬಿರ

27 KKP 01
Published on

ಕನಕಪುರ

ಭಾರತೀಯ ಸಶಸ್ತ್ರ ಪಡೆಯ ಹೆಮ್ಮೆ ಮತ್ತು ಧೈರ್ಯವನ್ನು ಸ್ಮರಿಸುವ ಕಾರ್ಗಿಲ್​ ವಿಜಯ್​ ದಿವಸ್​ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ ಎಂದು ಆರ್​ಇಎಸ್​ ಸಂಸ್ಥೆ ಅಧ್ಯಕ್ಷ ಎಚ್​.ಕೆ. ಶ್ರೀಕಂಠರು ಹೇಳಿದರು.

ನಗರದ ರೋಟರಿ ಭವನದಲ್ಲಿ ತಾಲೂಕು ಪತಂಜಲಿ ಯೋಗ ಸಮಿತಿ ಹಾಗು ರಾಷ್ಟ್ರೊತ್ಥಾನ ಪರಿಷತ್​ ಸಹಯೋಗದಲ್ಲಿ ಕಾರ್ಗಿಲ್​ ವಿಜಯ್​ ದಿವಸ್​ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಆಧುನಿಕ ಇತಿಹಾಸ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಕಾರ್ಗಿಲ್​ ಯುದ್ಧ ಮಹತ್ವದ್ದಾಗಿದೆ. ಇಂತಹ ಸಂದರ್ಭದಲ್ಲಿ ಹಮ್ಮಿಕೊಂಡಿರುವ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡುತ್ತಿರುವುದು ಪುಣ್ಯದ ಕೆಲಸವಾಗಿದೆ. ದಾನಿಗಳಿಂದ ಪಡೆಯುವ ರಕ್ತ ಜೀವನ್ಮರಣದ ನಡುವೆ ಹೋರಾಡುತ್ತಿರುವ ಸಾವಿರಾರು ಜೀವಗಳಿಗೆ ಅತ್ಯಮೂಲ್ಯವಾಗಿದೆ. ರಕ್ತದಾನವೂ ಮಹಾದಾನವಾಗಿದೆ ಎಂದರು.

ಯೋಗಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್ಯ, ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ಭಾನುಪ್ರಕಾಶ್​ ಮಾತನಾಡಿ, ರಕ್ತದಾನ ಮಾಡುವುದರಿಂದ ಅಗತ್ಯವಿರುವವರಿಗೆ ನೆರವಾಗುತ್ತದೆ. ಅಲ್ಲದೆ ಯೋಧರಿಗೆ ಸಲ್ಲಿಸುವ ಗೌರವವಾಗಿದೆ ಎಂದರು.  ಪತಂಜಲಿ ಯೋಗಸಮಿತಿಯ ಸುಮಂತ್​ ಆರ್ಯ, ರೋಟರಿ ಅಧ್ಯಕ್ಷ ಸಂತೋಷ್​, ಕಾರ್ಯದರ್ಶಿ ಸಿದ್ದರಾಜು, ದೇಸಯ್ಯ, ಮರಳವಾಡಿ ಉಮಾಶಂಕರ್​, ಜಯಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ, ಮೊಹಮ್ಮದ್​ ಏಜಾಜ್​ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net