

ಕನಕಪುರ: ತಾಲೂಕಿನ ಸಾತನೂರು ಹೋಬಳಿ ಹೊನ್ನಿಗನಹಳ್ಳಿ ಬಳಿ ಚಿರತೆಗಳ ಹಾವಳಿ ಕಂಡು ಬಂದ ಹಿನ್ನಲೆಯಲ್ಲಿ ಅದರ ಸೆರೆಗೆ ಗ್ರಾಮದ ಸಮೀಪ ಕರಿಕಲ್ಲು ಗಣಿಗಾರಿಕೆಯ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 2 ವರ್ಷದ ಹೆಣ್ಣು ಚಿರತೆಯೊಂದು ಸೆರೆ ಸಿಕ್ಕಿದೆ.
ಇತ್ತೀಚೆಗೆ ಕಾಡಾನೆ ಹಾವಳಿ ಜೊತೆಗೆ ಚಿರತೆ ಹಾವಳಿ ಹೆಚ್ಚಾಗಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರು. ಚಿರತೆ ಹಾವಳಿ ತಪ್ಪಿಸಿ ಅವುಗಳನ್ನು ಸೆರೆ ಹಿಡಿಯಲು ಗ್ರಾಮದ 2 ಕಡೆ ಬೋನುಗಳನ್ನು ಅಳವಡಿಸಿದ್ದರು. ಶನಿವಾರ ಮಧ್ಯಾಹ್ನ ಕರಿಕಲ್ಲು ಗಣಿಗಾರಿಕೆ ಬಳಿ ಇರಿಸಿದ್ಇದ ಬೋನಿಗೆ ಚೆರತೆ ಸೆರೆ ಸಿಕ್ಕಿದೆ.
ಸಾತನೂರು ವಲಯ ಅರಣ್ಯ ಅಧಿಕಾರಿ ಆಶಾ ಮಾತನಾಡಿ ಚಿರತೆಯನ್ನು ಸುರಕ್ಷಿತವಾಗಿ ವನ್ಯ ಜೀವಿ ಕಾಯ್ದೆಯಡಿ ಕಾಡಿಗೆ ಬಿಡಲಾಗುವುದು ಎಂದು ಉಪವಲಯ ಅರಣ್ಯಾಧಿಕಾರಿ ಗಣೇಶ್. ಸಿಬ್ಬಂದಿ ಕೃಷ್ಣ, ರಿಜ್ವಾನ್, ಕಾಂತರಾಜು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.