ಮೇಕೆ ಕದ್ದವ ಅಂದರ್

goat
ಸಾಂದರ್ಭಿಕ ಚಿತ್ರ
Published on

ಕನಕಪುರ: ತಾಲೂಕಿನ ತೊಪ್ಪಗನಹಳ್ಳಿಯ ಮನೆಯೊಂದರ ಬಳಿ ಕಟ್ಟಿಹಾಕಿದ್ದ ಮೇಕೆಗಳನ್ನು ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಂಗ ಒಪ್ಪಿಸಿದ್ದಾರೆ.

ತಿಗಳರಹಳ್ಳಿಯ ಅಭಿ (35) ಬಂಧಿತ. ತೊಪ್ಪಗನಹಳ್ಳಿಯ ಸುನೀಲ್​ ಅವರು ಮನೆ ಬಳಿ ಕಟ್ಟಿದ್ದ 2 ಮೇಕೆಗಳನ್ನು ಅಭಿ ಮಂಗಳವಾರ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಾಗ ಅಭಿ ಮೇಕೆ ಕದ್ದಿರುವುದು ಪತ್ತೆಯಾಗಿತ್ತು.

ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸರ್ಕಲ್​ ಇನ್​ಸ್ಪೆಕ್ಟರ್​ ಕೆ.ಎಲ್​. ಕೃಷ್ಣ ಮಾರ್ಗದರ್ಶನದಲ್ಲಿ ಎಸ್​ಐ ಮನೋಹರ್​ ಮತ್ತು ಸಿಬ್ಬಂದಿ ಆರೋಪಿಯನ್ನು ಬಂಧಿಸಿ ಮೇಕೆಗಳನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net