19ರ ರೈತರ ಪ್ರತಿಭಟನೆಗೆ ಸಹಕಾರ ನೀಡಲು ಮನವಿ

13 KKP 3
Published on

 ಕನಕಪುರ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿಗಳ ಹೆಸರಿನಲ್ಲಿ ಗೊಂದಲ ಏರ್ಪಟ್ಟಿದ್ದು, ರೇಷ್ಮೆ ಬೆಲೆ ಕುಸಿತ ಮತ್ತು ಹಾಲಿನ ದರ ಕಡಿತ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಜು.19ರಂದು ರೈತ ಸಂಘ ಕರೆ ನೀಡಿರುವ ಪ್ರತಿಭಟನೆಗೆ ಸಂಘ ಸಂಸ್ಥೆಗಳು, ರೈತ ಸಂಘಟನೆಗಳು ಸಹಕಾರ ನೀಡಬೇಕು ಎಂದು ಸಂಘದ ತಾಲೂಕು ಅಧ್ಯಕ್ಷ ಯು.ಕೆ. ಸತೀಶ್ ಮನವಿ ಮಾಡಿದರು.

ನಗರದ ಕೋಟೆ ಗಣಪತಿ ದೇವಾಲಯದಲ್ಲಿ ಪ್ರತಿಭಟನೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಕಾಡಾನೆಗಳ ಹಾವಳಿ, ಬೆಲೆ ಏರಿಕೆ, ಸಾರ್ವಜನಿಕರನ್ನು ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದಕ್ಕೆ ವಿರೋಧ ಹಾಗೂ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಗೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ರೈತರು, ವಿವಿಧ ಸಂಘ ಸಂಸ್ಥೆಗಳು, ಕನ್ನಡಪರ ಸಂಘಟನೆಗಳು ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.

ಜಯಕರ್ನಾಟಕ ಜನಪರ ವೇದಿಕೆ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ರೈತ ಪರ ಹೋರಾಟಕ್ಕೆ ಸಹಕಾರ ನೀಡಬೇಕು. ಎಂದರು.

ರೈತ ಸಂಘದ ಜಿಲ್ಲಾ ಮಾಜಿ ಅಧ್ಯಕ್ಷ ದೇವರಾಜು, ಮಾಜಿ ತಾಲೂಕು ಅಧ್ಯಕ್ಷರು ಅನಂತರಾಮಪ್ರಸಾದ್, ಕೆಬ್ಬಳ್ಳಿ ಶಿವರಾಜ, ಮುಖಂಡರಾದ ಗಜೇಂದ್ರಸಿಂಗ್, ಮಲ್ಲಿಕಾರ್ಜುನ್, ಕೆ.ಆರ್.ಸುರೇಶ್, ದುಂಡಪ್ಪ, ನಲ್ಲಹಳ್ಳಿ ಶ್ರೀನಿವಾಸ್, ಮರಳವಾಡಿ ರಾಜಣ್ಣ, ಕನ್ನಡಪರ ಸಂಘಟನೆಯ ಭಾಸ್ಕರ್, ಶ್ರೀನಿವಾಸ್, ಕೆ.ಆರ್.ಸುರೇಶ್ ಮತ್ತಿತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net