ಆರ್ಥಿಕವಾಗಿ ಸಬಲರಾಗಲು ಹೈನುಗಾರಿಕೆ ಉತ್ತಮ ಸಂಸದ ಡಿಕೆ ಸುರೇಶ್

23 KKP 01
Published on

ಕನಕಪುರ

ರೈತರು ಇತ್ತೀಚಿನ ದಿನಗಳಲ್ಲಿ ಮಳೆ-ಬೆಳೆ, ಬರಗಾಲ ಎದುರಿಸುವಂತಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.

ತಾಲೂಕಿನ ಕಸಬಾ ಹೋಬಳಿಯ ಶಿವನಹಳ್ಳಿ ಗ್ರಾಪಂ ವ್ಯಾಪ್ತಿಯ ತುಳಸಿದೊಡ್ಡಿ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಭಾನುವಾರ ಉದ್ಘಾಟಿಸಿ, ಮಾತನಾಡಿದರು.

ಇದುವರೆಗೂ ಮಳೆ ಬಾರದೆ ರೈತರಿಗೆ ತೊಂದರೆಯಾಗುತ್ತಿದೆ. ಇಂತಹ ಸಮಯದಲ್ಲಿ ಹೈನುಗಾರಿಕೆ ಅವಲಂಬಿಸಿರುವವರಿಗೆ ನಿರಂತರ ಆದಾಯ ಕೊಡುವಂತೆ ಹೈನುಗಾರಿಕೆಯನ್ನು ಉಪಕಸುಬಾಗಿ ಅವಲಂಬಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ರೈತರಿಗೆ ಕೃಷಿಯ ಜತೆಗೆ ದಿನನಿತ್ಯ ಖರ್ಚು-ವೆಚ್ಚ ಸರಿದೂಗಿಸಲು ಈ ಉದ್ಯಮ ಸಹಕಾರಿಯಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಬಮುಲ್ ಅಧ್ಯಕ್ಷ ರಾಜ್‌ಕುಮಾರ್, ತುಳಸಿದೊಡ್ಡಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಸುಮಿತ್ರಾಬಾಯಿ, ಸಿಇಒ ಪ್ರೀತಿ, ಗ್ರಾಪಂ ಸದಸ್ಯೆ ಸುಶೀಲಬಾಯಿ, ಗ್ರಾಮದ ಮುಖಂಡರಾದ ಡಿ.ಎಂ.ವಿಶ್ವನಾಥ್, ಬಲರಾಮನಾಯಕ, ಜನಾರ್ಧನ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net