ಕನಕಪುರ ನಗರಸಭೆ ಮೇಲೆ ಲೋಕಾಯುಕ್ತ ದಾಳಿ

12bd306b-12db-4d92-94f2-02f627f555a0
Published on

ರಾಮನಗರ: ಕಡತ ವಿಲೇವಾರಿ ವಿಳಂಭ ಆರೋಪದ ಹಿನ್ನೆಲೆಯಲ್ಲಿ ರಾಮನಗರ ಲೋಕಾಯುಕ್ತ ಪೊಲೀಸರು  ಮಂಗಳವಾರ ದಿಢೀರ್​ ದಾಳಿ ನಡೆಸಿ ಪರಿಶೀಲನೆ ನಡೆಸಿದರು.

ಲೋಕಾಯುಕ್ತರ ಎಸ್​ಪಿ ಪುಟ್ಟಮಾದಯ್ಯ, ಡಿವೈಎಸ್​ಪಿ ಗೌತಮ್​ ಹಾಗೂ ಇನ್ಸ್​ ಪೆಕ್ಟರ್​ ಸತೀಶ್​  ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸಿದೆ.  ಕನಕಪುರ ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಭವಾಗುತ್ತಿವೆ ಮತ್ತು ಕಡತ ವಿಲೇವಾರಿಯೂ ಮಂದಗತಿಯಲ್ಲಿ ಸಾಗುತ್ತಿದೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆದು, ಸ್ಥಳದಲ್ಲಿಯೇ ಇದ್ದ ನಗರಸಭೆ ಸಿಬ್ಬಂದಿಯಿಂದ ಮಾಹಿತಿ ಕಲೆ ಹಾಕಿರುವ ಜೊತೆಗೆ, ಕಡತಗಳ ಪರಿಶೀಲನೆಯೂ ಸಹ ಮಾಡಲಾಗಿದೆ. ಈ ವೇಳೆ ಎಸ್​ಪಿ ಪುಟ್ಟಮಾದಯ್ಯ, ಅಲ್ಲಿನ ಸಿಬ್ಬಂದಿಗೆ ಸಾರ್ವಜನಿಕ ಸ್ನೇಹಿ ಆಢಳಿತ ನೀಡುವ ಬಗ್ಗೆಯೂ ಸೂಚನೆಗಳನ್ನು ಸಹ ನೀಡಿದ್ದು, ಮಧ್ಯಾಹ್ನವೂ ಸಹ ಕಡತಗಳ ಪರಿಶೀಲನೆ ಮುಂದುವರಿದಿತ್ತು.

ಕಳೆದ ಕೆಲವು ದಿನಗಳ ಹಿಂದಷ್ಟೇ ಭ್ರಷ್ಠಾಚಾರದ ಕೂಪವಾಗಿರುವ ಬಿಡದಿಯ ಸಮೂದಾಯ ಆರೋಗ್ಯ ಕೇಂದ್ರಕ್ಕೂ ದಿಢೀರ್ ಬೇಟಿ ನೀಡಿ ಅಲ್ಲಿನ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ತಾರಟೆಗೆ ತೆಗೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net