ಇಷ್ಟಲಿಂಗ ಪೂಜೆಯಿಂದ ಅಂತರಂಗಶುದ್ಧಿ ಚನ್ನಪಟ್ಟಣ ವಿರಕ್ತ ಮಠಾಧ್ಯಕ್ಷ ಶ್ರೀ ಶಿವರುದ್ರ ಸ್ವಾಮೀಜಿ ಅಭಿಪ್ರಾಯ

Kailancha-Ph-0001-Shivadeekse-Darmaprachara Programme Kailancha- 29-7-2023
Published on

ಕೈಲಾಂಚ

ಇಷ್ಟಲಿಂಗ ಪೂಜೆ ಒಳ್ಳೆಯ ಸಂಸ್ಕಾರ ಆಚಾರ ವಿಚಾರ ಕಲಿಸುವ ಜತೆಗೆ ಮನಸ್ಸಿಗೆ ಏಕಾಂತ ಮತ್ತು ಅಂತರಂಗಶುದ್ಧಿ ಮಾಡುತ್ತದೆ ಎಂದು ಚನ್ನಪಟ್ಟಣ ವಿರಕ್ತ ಮಠಾಧ್ಯಕ್ಷ ಶ್ರೀ ಶಿವರುದ್ರ ಸ್ವಾಮೀಜಿ ತಿಳಿಸಿದರು.

ಕೈಲಾಂಚಯ ಬಸವೇಶ್ವರ ದೇವಾಲಯದ ಆವರಣದಲ್ಲಿ ವೀರಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು, ಅಖಿಲ ಭಾರತ ವೀರಶೈವ ಮಹಾಸಭಾ ರಾಮನಗರ ತಾಲೂಕು ಮತ್ತು ರಾಮನಗರ ತಾಲೂಕು ವೀರಶೈವ ಯುವಕ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಧರ್ಮಪ್ರಸಾರ ಹಾಗೂ ಶಿವಧೀಕ್ಷೆ -ಲಿಂಗಧೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವ ಪೀಳಿಗೆ ಆಧುನಿಕತೆಯ ಭರಾಟೆಯಲ್ಲಿ ಅನ್ಯ ಸಂಸತಿಗೆ ಮಾರುಹೋಗಿ ಪುರಾತನ ಸಂಸತಿ, ಆಚಾರ ವಿಚಾರಗಳಿಂದ ದೂರ ಸರಿಯುತ್ತಿದ್ದಾರೆ. ನಮ್ಮ ಸಂಸತಿಗೆ ಜೀವನದ ದಿಕ್ಕು ಬದಲಿಸುವ ಶಕ್ತಿ ಇದೆ. ಭಾರತೀಯ ಸಂಸತಿ ತನ್ನದೇ ಆದ ಮಹತ್ವ ಹೊಂದಿದೆ ಎಂದರು.

ದೇವರನ್ನು ಇಷ್ಟಲಿಂಗದಲ್ಲೇ ಕಾಣಬಹುದು.ಈ ನಿಟ್ಟಿನಲ್ಲಿ ಸುತ್ತೂರು ಮಹಾಸಂಸ್ಥಾನ ಶಿವಧೀಕ್ಷೆ ಕಾರ್ಯಕ್ರಮದ ಮೂಲಕ ಧರ್ಮತತ್ವ, ಧೀಕ್ಷೆ ಸಂಸ್ಕಾರ, ಲಿಂಗಧಾರಣೆ ಮಹತ್ವ ತಿಳಿಸಿ. ಆಸಕ್ತರಿಗೆ ಧೀಕ್ಷೆ ಲಿಂಗಧಾರಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ ಎಂದರು.

ರೇವಣಸಿದ್ದೇಶ್ವರ ಬೆಟ್ಟದ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಷ್ಟಲಿಂಗ ಪೂಜೆ ಮಾಡಿ ಆಚರಣೆ ಮಾಡಿದಾಗ ಅದರ ಫಲ ಸಿಗುತ್ತದೆ. ದೇಹದ ಮೇಲೆ ಲಿಂಗ ಕಟ್ಟಿ ಸುಮ್ಮನಿದ್ದರೆ ಯಾವ ಯೋಗವೂ ಸಿಗದು. ಯುವ ಪೀಳಿಗೆ ಇಷ್ಟಲಿಂಗಪೂಜೆ ಕೈಗೊಂಡು ಪ್ರತಿದಿನ ಅಂಗದ ಮೇಲಿರುವ ಲಿಂಗು ಕಳಚಿಡದೆ ಪೂಜೆ ನಡೆಸಿ. ಸಂಸ್ಕಾರವಂತರಾಗಿ ಸಮಾಜದಲ್ಲಿ ಉತ್ತಮ ಜೀವನ ನಡೆಸಬಹುದು ಎಂದರು.

ಯುವಕ - ಯುವತಿಯರು ಸೇರಿ 60ಕ್ಕೂ ಹೆಚ್ಚು ಮಂದಿ ಲಿಂಗಧೀಕ್ಷೆ ಪಡೆದರು. ಗ್ರಾಪಂ ಸದಸ್ಯೆ ರತ್ನಮ್ಮ, ಮುಖಂಡರು ಪೊಲೀಸ್​ ಶಿವಕುಮಾರ್​, ಡೇರಿ ಅಧ್ಯಕ್ಷ ನಾಗರಾಜು, ಗ್ರಾಪಂ ಮಾಜಿ ಸದಸ್ಯ ರೇಣುಕಾಪ್ರಸಾದ್​, ಪ್ರಭು, ಶಿವಶಂಕರ್​, ಪ್ರಕಾಶ್​, ಶಿವಕುಮಾರ್​, ಪುಟ್ಟಹೊನ್ನಪ್ಪ, ಟೈಲರ್​ ನಾಗರಾಜು, ಮಹದೇವಯ್ಯ, ಕೆ.ಎಂ. ನಾಗರಾಜು, ಗುರುಲಿಂಗಯ್ಯ, ಶಿವಣ್ಣ, ಶಿವರಾಜು ಗಿರೀಶ್​ ಮುಂತಾದವರು ಹಾಜರಿದ್ದರು.

ಯುವ ಪೀಳಿಗೆಗೆ ವೀರಶೈವ ಧರ್ಮದ ಸಾರ ತಿಳಿಸಲು ಇಷ್ಟಲಿಂಗ ಪೂಜೆಯ ಮಹತ್ವ ಸಾರುವ ಉದ್ದೇಶದಿಂದ ಧರ್ಮಪ್ರಚಾರ ಮತ್ತು ಶಿವಧೀಕ್ಷೆ - ಲಿಂಗಧೀಕ್ಷೆ ಕಾರ್ಯಕ್ರಮವನ್ನು ಜುಲೈ 7ರಿಂದ ನಡೆಸಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

 ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಬೇವೂರು ಮಠಾಧ್ಯಕ್ಷರು, ಚನ್ನಪಟ್ಟಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net