ಸ್ಮಶಾನದ ಬೇಲಿಗೆ ಹಾನಿ ಮಾಡಿದ ಗಜಪಡೆ ತುಂಬೇನಹಳ್ಳಿ ನಾಲ್ಕು ಆನೆಗಳ ದಾಳಿ

Kailancha-Ph-01-Ane-Smasana-Dali-Pencing Kamba Nasa-Thumbenahalli-7-7-2023 (1)
Published on

ಕೈಲಾಂಚ (ರಾಮನಗರ) 

ಹೋಬಳಿಯ ತುಂಬೇನಹಳ್ಳಿಯಲ್ಲಿ ಗುರುವಾರ ರಾತ್ರಿ ನಾಲ್ಕು ಆನೆಗಳ ಹಿಂಡು ಸ್ಮಶಾನದ ಬೇಲಿಗೆ ಅಳವಡಿಸಿದ್ದ ಸಿಮೆಂಟ್​ ಕಂಬಗಳು ಹಾಗೂ ಮುಳ್ಳುತಂತಿಯನ್ನು ಉರುಳಿಸಿವೆ.

ನರೇಗಾ ಯೋಜನೆಯಲ್ಲಿ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕಳೆದ ವರ್ಷ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಗ್ರಾಮದ ಸ್ಮಶಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಹಂದಿಗೊಂದಿ ಅರಣ್ಯದ ಸುತ್ತ ಓಡಾಡುತ್ತ ತುಂಬೇನಹಳ್ಳಿ ಕಡೆ ಬಂದಿರುವ ಆನೆಗಳು ಸ್ಮಶಾನದ ಸುತ್ತ ನಿರ್ಮಿಸಿದ್ದ ಬೇಲಿಗೆ ಅಳವಡಿಸಿದ್ದ 20ಕ್ಕೂ ಹೆಚ್ಚು ಸಿಮೆಂಟ್​ ಕಂಬಗಳನ್ನು ನಾಶಪಡಿಸಿವೆ.

ಇದಲ್ಲದೆ ಸಾಗುವ ಮಾರ್ಗದಲ್ಲಿ ಜಮೀನುಗಳಲ್ಲಿನ ಮಾವು, ತೆಂಗಿನ ಮರಗಳಿಗೂ ಹಾನಿಯುಂಟುಮಾಡಿವೆ. ಕಳೆದ ವಾರ ಒಂಟಿ ಆನೆ ಪ್ರತ್ಯಕ್ಷವಾಗಿತ್ತು. ಇಂದು ನಾಲ್ಕು ಆನೆಗಳು ಮತ್ತೆ ಉಪಟಳ ಶುರು ಮಾಡಿವೆ. ಕೂಡಲೇ ಆನೆಗಳನ್ನು ಸ್ವಸ್ಥಾನಕ್ಕೆ ಸೇರಿಸುವ ಕೆಲಸ ಮಾಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net