ನಾಟಕಗಳು ಭಾರತೀಯ ಸಂಸ್ಕೃತಿಯ ಕಣಜ

Kailancha - Ph-01- Shaneswara Nataka Swamiji Vibhuthikere-9-7-2023
Published on

ಗೇರುಮಾಳ ವಿರಕ್ತ ಮಠದ ಎಡೇರುದ್ರ ಸ್ವಾಮೀಜಿ ಅಭಿಪ್ರಾಯ

ಕೈಲಾಂಚ(ರಾಮನಗರ)

ನಾನು ಎಂಬ ಅಹಂ ಬಿಟ್ಟಾಗ ಮಾತ್ರ ಮನುಷ್ಯ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಗೇರುಮಾಳ ವಿರಕ್ತ ಮಠದ ಎಡೇರುದ್ರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹೋಬಳಿಯ ವಿಭೂತಿಕೆರೆ ಗ್ರಾಮದಲ್ಲಿ ಬಸವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಹಮ್ಮಿಕೊಂಡಿದ್ದ ಶನಿ ಪ್ರಭಾವ ಅಥವಾ ರಾಜಾ ಸತ್ಯವ್ರತ ನಾಟಕದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ವೈಯಕ್ತಿಕ ಬದುಕಿಗೆ ಕೊಡುವ ಪ್ರಾಮುಖ್ಯತೆಯನ್ನು ಸಮಾಜಮುಖಿ ಕಾರ್ಯಗಳಿಗೆ ನೀಡಿದಾಗ ಸುಂದರ ಸಮಾಜ ನಿರ್ಮಾಣ ಮಾಡಬಹುದು.

ಗ್ರಾಮೀಣ ಪ್ರದೇಶದಲ್ಲಿ ನಡೆಯುವ ನಾಟಕ ಕಲೆಗಳು ಭಾರತೀಯ ಸಂಸ್ಕೃತಿಯ ಕಣಜಗಳಾಗಿವೆ. ಮಾನವೀಯ ಮೌಲ್ಯಗಳನ್ನು ತಿಳಿಸುವ ನಾಟಕಗಳು ಉತ್ತಮ ಕಥಾ ಹಂದರವನ್ನು ಹೊಂದಿವೆ. ಗ್ರಾಮಗಳಲ್ಲಿ ಸಾಮರಸ್ಯ ಮೂಡಿಸಲು ನಾಟಕಗಳು ಕಾರಣವಾಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ, ಸಬ್ಬಕೆರೆ ಡೇರಿ ಅಧ್ಯಕ್ಷ ಶಿವಲಿಂಗಪ್ಪ, ವಿಎಸ್​ಎಸ್​ಎನ್​ ನಿರ್ದೇಶಕ ಅಂಜನಾಪುರ ವಾಸು ಮಾತನಾಡಿದರು. ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷ ಪೊಲೀಸ್​ ರುದ್ರೇಶ್​, ಮುಖಂಡರಾದ ಗಟ್ಟೀಪುರ ದೀಪು, ಗ್ರಾಪಂ ಸದಸ್ಯರಾದ ಲೀಲಾವತಿ ಶಿವರಾಜು, ಶ್ರೀನಿವಾಸ್​, ಮುಖಂಡರಾದ ಅಂಜನಾಪುರ ರೇವಣ್ಣ, ಚಿಕ್ಕೇನಹಳ್ಳಿ ಚಂದ್ರಣ್ಣ, ಚನ್ನಬಸವಯ್ಯ, ಎಂ.ಎಸ್​.ಮಹದೇವಯ್ಯ, ಡೇರಿ ರವಿ, ಪೂಜಾರಿ ಶಿವಲಿಂಗಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಶಿವಲಿಂಗಪ್ರಸಾದ್​, ಕಂಟ್ರಾಕ್ಟರ್​ ಮಹದೇವಯ್ಯ, ನಂದೀಶ್​, ಮೈಕ್​ ನಾಗರಾಜು, ಮಹದೇವಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net