ಈ ಬಾರಿಯ ಬುಡಕಟ್ಟು ಲೋಕೋತ್ಸವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಗಿರಿಜನ ಲೋಕ ಪ್ರಾರಂಭ, ಜಾನಪದ ಜಾದು ಮೋಡಿ, ಕೆಂಡ ಕೊಂಡೋತ್ಸವದ ಸತ್ಯಮಿತ್ಯ, ಇದೇ ಮೊದಲ ಬಾರಿಗೆ ಲೋಕ ಸರೋವರದಲ್ಲಿ ತೆಪ್ಪೋತ್ಸವ, ಜಾನಪದ ಲೋಕಕ್ಕೆ ಗ್ರಾಮದೇವತೆಯ ಆಗಮನ, ಗಂಗಾಧರೇಶ್ವರ ಸ್ವಾಮಿಯ ಸ್ಥಾಪನೆ, ಅತ್ಯದ್ಭುತ ಗಮನ ಸೆಳೆಯುವ ಗಿರಿಜನ ಲೋಕದ ಪ್ರಾರಂಭ, ನವೀಕರಣಗೊಂಡ ವಿಡಿಯೋ ಸ್ಕೋಪ್ ಥಿಯೇಟರ್‌ನ ಅನಾವರಣ, ಗೀತ ಗಾಯನೋತ್ಸವ ರಾಜ್ಯಹೊರ ರಾಜ್ಯದ ಜನಪದ ಕಲೆಗಳ ರಸದೌತಣ, ಬುಡಕಟ್ಟು ನತ್ಯೋತ್ಸವ, ವಿಚಾರ ಸಂಕಿರಣ, ರಾಜ್ಯದ ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸವಾರಂಭ ನಡೆಯಲಿದೆ.