ಚಂದ್ರ ಶಿಕಾರಿ ತಂಡದಲ್ಲಿ ಕೈಲಾಂಚದ ಮುರಳೀಧರ

Kailancha _ Ph-001-Isro Scintist-K.R. Muralidara Kailancha-24-8-23
Published on

ಕೈಲಾಂಚ (ರಾಮನಗರ)

ಭಾರತದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಚಂದ್ರಯಾನ-3 ಯಶಸ್ಸಿಗೆ ಕಾರಣೀಭೂತರಾದವರು ಇಸ್ರೋ ವಿಜ್ಞಾನಿಗಳು. ಇಂದು ದೇಶ, ವಿದೇಶಗಳಲ್ಲಿ ಇಸ್ರೋ ಗುಣಗಾನ ನಡೆಯುತ್ತಿದೆ.

ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಚಂದ್ರ ಶಿಕಾರಿ ಮಾಡಿದ ಇಸ್ರೋ ತಂಡದಲ್ಲಿ ರಾಮನಗರ ತಾಲೂಕಿನ, ಕೈಲಾಂಚ ಗ್ರಾಮದ ಕೆ.ಆರ್. ಮುರಳೀಧರ ಕೂಡ ಒಬ್ಬರಾಗಿದ್ದು ಪ್ರಸ್ತುತ ಉಡಾವಣಾ ವಿಭಾಗದಲ್ಲಿ ಹಿರಿಯ ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೈಲಾಂಚ ಗ್ರಾಮದ ಕೆ. ಅರಸೇಗೌಡರ ಮಗ ರಾಮಣ್ಣನವರ ಮಗನಾದ ಮುರಳೀಧರ ರೈತಾಪಿ ಕುಟುಂಬದಿಂದ ಬಂದವರು. ಪ್ರಾಥಮಿಕ ಶಿಕ್ಷಣವನ್ನು ಕೈಲಾಂಚ ಸರ್ಕಾರಿ ಶಾಲೆಯಲ್ಲಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬನ್ನಿಕುಪ್ಪೆ ಕೆಂಗಲ್ ಆಂಜನೇಯ ಗ್ರಾಮಾಂತರ ಪ್ರೌಢಶಾಲೆಯಲ್ಲಿ ನಡೆಸಿ, ಕಾಲೇಜು ವಿದ್ಯಾಭ್ಯಾಸವನ್ನು ಕನಕಪುರ ರೂರಲ್ ಕಾಲೇಜಿನಲ್ಲಿ ಮಾಡಿದ್ದಾರೆ. ಕಳೆದ ಇಪ್ಪತ್ತು ವರ್ಷದಿಂದ ವಿಜ್ಞಾನಿಯಾಗಿ ಇಸ್ರೋದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಪ್ಪಟ ಗ್ರಾಮೀಣ ಪ್ರತಿಭೆ ಚಂದ್ರಯಾನ -3ರ ಯಶಸ್ವಿ ಉಡಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿರುವುದು ನಮ್ಮೂರಿಗೆ, ತಾಲೂಕಿಗೆ, ಜಿಲ್ಲೆಗೆ ಹೆಮ್ಮೆಯ ವಿಷಯ. ನಮ್ಮೂರಿನ ವಿಜ್ಞಾನಿಗೆ ಸೆಲ್ಯೂಟ್ ಎನ್ನುತ್ತಾರೆ ಕೈಲಾಂಚ ವ್ಯವಸಾಯ ಸೇವಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹನುಮಯ್ಯ, ಜಿಪಂ ಮಾಜಿ ಸದಸ್ಯ ವಿ.ಎಚ್. ರಾಜು, ವಿಎಸ್‌ಎಸ್‌ಎನ್ ಅಧ್ಯಕ್ಷ ವೆಂಕಟೇಶ್ ಹಾಗೂ ಗ್ರಾಮಸ್ಥರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net