ಹೊರ ರಾಜ್ಯದ ಸರಕು ವಾಹನಗಳಾದರೆ, ಪೊಲೀಸರಿಗೆ ದೂರು ನೀಡದೆ ಹೋಗುತ್ತಾರೆ ಎಂಬುದು ನಂಬಿಕೆಯೊಂದಿಗೆ ಹೆಚ್ಚು ಇಂತಹಾ ವಾಹನಗಳ ಮೇಲೆ ಕಣ್ಣು ಇಡುತ್ತಿದ್ದರು ಎನ್ನಲಾಗಿದೆ. ಪೊಲೀಸರು ಬಂಧಿಸಿರುವ ಆರೋಪಿಗಳು, ಹೆದ್ದಾರಿಯಲ್ಲಿ ನಡೆದಿರುವ ಹಲವು ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರಕಿದ್ದು, ಹೆದ್ದಾರಿಯ ನಿರ್ಜನ ಪ್ರದೇಶದಲ್ಲಿ ನಿಂತಿರುವ ವಾಹನಗಳನ್ನು ಅಡ್ಡಗಟ್ಟಿ ಕೃತ್ಯ ಎಸಗುತ್ತಿದ್ದು, ಪೊಲೀಸರ ವಿಚಾರಣೆಯಿಂದ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.