ಬಿಡದಿ: ಹೆಜ್ಜಾಲ ಗ್ರಾಮದಲ್ಲಿ ಹಿಂದು ಜಾಗರಣ ವೇದಿಕೆಯ ಗ್ರಾಮ ಘಟಕವನ್ನ ಭಾನುವಾರ ಉದ್ಘಾಟನೆ ಮಾಡಲಾಯಿತು. ವೇದಿಕೆಯ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರುಗಳ ಉಪಸ್ಥಿತಿಯಲ್ಲಿ ಗ್ರಾಮ ಶಾಖೆ ಅನಾವರಣ ಗೊಂಡಿತು.
ಜಾಗರಣ ವೇದಿಕೆಯ ತುಮಕೂರು ವಿಭಾಗದ ಸಂಚಾಲಕರಾದ ಅನಿಲ್ ಬಾಬು ಮಾತನಾಡಿ ಸಮಾಜದ ಸರ್ವಾಂಗೀಣ ಉನ್ನತಿಗಾಗಿ ಹಿಂದು ಸಾಮಾಜದ ಜಾಗೃತಿಯೆ ಪರಿಹಾರ, ಹಿಂದು ಸಮಾಜವನ್ನು ವಿಭಜಿಸಲು ಯತ್ನಿಸುತ್ತಿರುವ ರಾಜಕೀಯ ಶಕ್ತಿಗಳು ಮತ್ತು ಜೀಹಾದಿ, ಮತಾಂತರಿಗಳ ಮಟ್ಟ ಹಾಕಲು ಜಾಗರಣ ವೇದಿಕೆ ಈ ಘಟಕ ಪ್ರಬಲವಾಗಲಿ ಎಂದರು.
ವೇದಿಕೆಯ ಜಿಲ್ಲಾ ಸದಸ್ಯರಾದ ಅನ್ನಪೂರ್ಣ ಮಂಜುನಾಥ ಮಾತನಾಡಿ ಕೇವಲ ಶೇ.10 ಹಿಂದುಗಳು ಜಾಗೃತರಾಗಿ ಸಂಘಟಿದರಾದ ಪರಿಣಾಮ ಇವತ್ತು 450 ವರ್ಷಗಳ ರಾಮಜನ್ಮಭೂಮಿ ಹೊರಾಟ ತಾತ್ವಿಕ ಅಂತ್ಯ ಕಂಡಿದೆ, ಕೈ ಬಿಟ್ಟು ಹೊಗುತ್ತಿದ್ದ ಕಾಶ್ಮೀರ ಸರಿ ಹೋಗುತ್ತಿದೆ, ಕಾಶಿ ಮತ್ತೆ ಕಳೆ ಬಂದಿದೆ, ಸರ್ವ ಹಿಂದುಗಳು ಸಂಘಟಿದರಾದರೆ ವಿಶ್ವಕ್ಕೆ ಗುರುವಾಗುವತ್ತ ನಡೆಯುತ್ತಿರುವ ಭಾರತವನ್ನು ಯಾರು ತಡೆಯಲು ಸಾದ್ಯವಿಲ್ಲ ಎಂದು ಹೇಳಿದರು.
ಹಿರಿಯ ಮುಖಂಡರಾದ ಕಣಿಮಿಣಿಕಿ ಶಿವಣ್ಣ, ಶಾಂತರಾಜು, ಗೋವಿಂದರಾಜು, ಜಾಗರಣ ವೇದಿಕೆ ಹೆಜ್ಜಾಲ ಘಟಕದ ನಾಗರಾಜು, ಅನ್ನದಾನಸ್ವಾಮಿ, ಧನಂಜಯ, ಬಸವರಾಜು ಉಪಸ್ಥಿತರಿದ್ದರು.