ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಇನ್ನು ರಾಮನಗರದ ದೊಡ್ಡಮಣ್ಣುಗುಡ್ಡೆ ಮನೆ ನಿರ್ಮಾಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, 58 ಕೋಟಿ ರೂ. ವೆಚ್ಚದಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ದೊಡ್ಡಮಣ್ಣುಗುಡ್ಡೆ ಬಳಿ ನಿರ್ಮಾಣಕ್ಕೂ ತಕರಾರು ನಡೆಯುತ್ತಿದೆ. ಅಲ್ಲಿ ಮನೆಗಳ ನಿರ್ಮಾಣ ಕಾರ್ಯ ನಡೆಸಬಾರದು ಎಂದು ಕಾಂಗ್ರೆಸ್, ಬಿಜೆಪಿಯವರು ತಕರಾರು ಮಾಡುತ್ತಿದ್ದಾರೆ. 2006ರಲ್ಲಿ ಬಡವರಿಗೆ ಮನೆ ಕೊಡಲು 30 ಕೋಟಿ ನೀಡಿದ್ದೆ. ಆದರೆ, ಸರ್ಕಾರ ಹೋದ ನಂತರ, ಆ ಹಣ ಬೇರೆ ಕಡೆ ಡೈವರ್ಟ್ ಮಾಡಿಕೊಂಡು ಮನೆ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಮಾಡಿದರು.