ಕಾಂಗ್ರೆಸ್ ಗೆ ಮತ ನೀಡಿದರೆ ಏನು ಲಾಭ ಡಿಕೆಶಿಗೆ, ಎಚ್ಡಿಕೆ ತಿರುಗೇಟು

HKD1
Published on
ಚನ್ನಪಟ್ಟಣ
ನಮ್ಮ ಪಕ್ಷಕ್ಕೆ ಮತ ನೀಡಿ ಎಂದು ಕೇಳಬೇಕೇ ಹೊರತು ಬೇರೆಯವರಿಗೆ ಮತ ನೀಡಬೇಡಿ‌ ಎಂದು ಹೇಳುವುದು ತಪ್ಪು ಎಂದು ಮಾಜಿ ಸಿಎಂ ಎಚ್.ಡಿ‌.ಕುಮಾರಸ್ವಾಮಿ ಡಿಕೆಶಿಗೆ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಗೆ ಮತ ಹಾಕಿದರೆ ವ್ಯರ್ಥ, ಕಾಂಗ್ರೆಸ್ ಮತ ಹಾಕಿ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಮತ ಹಾಕಿದರೆ ಲಾಭ ಎಲ್ಲಾಗುತ್ತೆ? ಯಾರಿಗೆ ಲಾಭ ಆಗುತ್ತೆ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ನಲ್ಲಿ ಈಗಾಗಲೇ 15 ಜನ ಸಿಎಂ ಆಗೋದಕ್ಕೆ ತಯಾರಾಗಿದ್ದೀವಿ ಅಂತಿದ್ದಾರೆ. ಅಷ್ಟು ಜನ ಸಿಎಂ ಆಗೋದಕ್ಕೆ ತಯಾರಾಗಿದ್ದಾಗ ಕಾಂಗ್ರೆಸ್ ಮತ ಕೊಟ್ಟರೆ ಏನು ಪ್ರಯೋಜನಾ..? ಕಾಂಗ್ರೆಸ್ ನಲ್ಲಿ ಪಕ್ಷದಲ್ಲಿ ಗುಂಪುಗಾರಿಕೆ ಇದೆ. ಕುಮಾರಸ್ವಾಮಿ ಈಗಾಗಲೇ ಸಿಎಂ ಆಗಿದ್ದಾರೆ ಅದಕ್ಕೆ ಮತ ಹಾಕಬೇಡಿ ಅಂದರೆ ಏನಾರ್ಥ. ಡಿ.ಕೆ.ಶಿವಕುಮಾರ್ ಹೇಳಿಕೆಗೆ ಮಹತ್ವ ಕೊಡಬೇಕಾಗಿಲ್ಲ. ಅವರದ್ದು ಬಾಲಿಷವಾದ ಹೇಳಿಕೆಗಳು. ಅವರಿಗೆ ಮತಕೊಟ್ಟರೆ ಮುಂದೆ ಡೆಲ್ಲಿಯಲ್ಲಿ ನಡೆಯುವ ಕಥೆಗಳು ಗೊತ್ತಿವೆ. ನನಗೆ ಮತ ಕೊಟ್ಟರೆ ಭದ್ರವಾಗಿಯೇ ಇರುತ್ತದೆ ಎಂದು ಕುಟುಕಿದರು.
ಬಿಜೆಪಿಯಲ್ಲಿ ಅಮಿತ್ ಶಾ ಬರುತ್ತಾರೆ, ಜೆಡಿಎಸ್ ಕಾಂಗ್ರೆಸ್ ಬಿ ಟೀಮ್ ಅಂತಾರೆ. ಕಾಂಗ್ರೆಸ್ ನವರು ಜೆಡಿಎಸ್ ಬಿಜೆಪಿ ಬಿ ಟೀಮ್ ಎನ್ನುತ್ತಾರೆ. ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಮ್ಮ ಪಕ್ಷದ ಮೇಲೆ ಹೇಳೊದಕ್ಕೆ ಬೇರೆ ವಿಷಯವೇ ಇಲ್ಲ.ಆದರೆ, ನಾನು ಜನರಿಗೆ ಪಂಚರತ್ನ ಯೋಜನೆ ಜಾರಿಗೆ ತರಲು ಅವಕಾಶ ನೀಡಿ, ಐದು ವರ್ಷದ ಸರ್ಕಾರ ನೀಡಿ ಎಂದು ಕೇಳುತ್ತಿದ್ದೇನೆ. ನನಗೂ ಅವರಿಗೂ ಇರುವ ವ್ಯತ್ಯಾಸ ಇಷ್ಟೇ ಎಂದು ಟಾಂಗ್ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net