ಸಹಕಾರ ಇಲಾಖೆ ಅಧಿಕಾರಿಗಳ ಆಟ ಇನ್ನೇರಡೇ ತಿಂಗಳು ಎಚ್ಡಿಕೆ ಎಚ್ಚರಿಕೆ

Dont Delit-Kumaraswami
Published on

ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ನಡೆದೆ ಬೊಂಬೆ ನಾಡ ಬಮೂಲ್ ಉತ್ಸವ ಬೆಂಗಳೂರು ಹಾಲು ಒಕ್ಕೂಟ ಸಹಕಾರ ಸಂಘದ ಕಾರ್ಯಕ್ರಮ ಅಲ್ಲ. ಇದು ಜಯಮುತ್ತು ಸಹಕಾರ ಸಂಘದ ಕಾರ್ಯಕ್ರಮ ಎಂದು ಮಾಜಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಬೊಂಬೆನಾಡ ಬಮೂಲ್ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲು ಬಮೂಲ್ ನಿರಾಕರಿಸಿದೆ. ಎಲ್ಲಾ ಅಧಿಕಾರಿಗಳು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೊದು ಗೊತ್ತಿದೆ. ಕೇವಲ ಇನ್ನೆರಡು ತಿಂಗಳು ಇದೆ ಅಷ್ಟೇ ಎಂದು ಎಚ್ಚರಿಕೆ ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಂಘದ ಎಆರ್, ಡಿಆರ್ ಗಳ ಆಟ ನೋಡಿದ್ದೇನೆ. ಪ್ರತಿನಿತ್ಯ ಲೂಟಿ ಮಾಡುತ್ತಿರುವವ ಬಗ್ಗೆ ಮಾಹಿತಿ ಇದೆ. ಸಹಕಾರ ಕ್ಷೇತ್ರದಲ್ಲಿ‌ ಕಾನೂನೇ ಇಲ್ಲದಂತಾಗಿದೆ. ಸಹಕಾರಿ ಕ್ಷೇತ್ರದ ಅಧಿಕಾರಿಗಳ ಈ ಕಳ್ಳಾಟ ಇನ್ನೆರಡು ತಿಂಗಳು ಅಷ್ಟೇ ಎಂದು ಎಚ್ಚರಿಕೆಯನ್ನು ನೀಡಿದರು.

 ದೈವ ಕೃಷೆಯಿಂದ ಹಿಂದ ಸಿಎಂ ಆಗಿದ್ದೆ. ನಾನು ಯಾರಿಗೂ ಕಿರುಕುಳ ನೀಡುವ ಕೆಲಸ ಮಾಡಿಲ್ಲ. ಎಲವನ್ನೂ ಗಮನಿಸುತ್ತಿದ್ದೇನೆ‌

ನಾನು ಜನತೆಗೆ ಗೌರವಕೊಟ್ಟು ಬದುಕಿದ್ದೇನೆ. ನಾನು ಹೆದರುವುದು ಜನತೆಗೆ ಮಾತ್ರ. ಅಧಿಕಾದಲ್ಲಿದ್ದಾಗ ಎಂದೂ ನಾನು ದರ್ಪ ತೀರಿಲ್ಲ. ಕಾನೂನು ಬಾಹಿರ ಚಟುವಟಿಕೆಯನ್ನ ನಾವು ಮಾಡಿಲ್ಲ. ಆದರೆ ಯಾರೋ ನಮ್ಮಲ್ಲೇ ಇದ್ದವನು ಈಗ ಬಿಜೆಪಿಗೆ ಹೋಗಿದ್ದಾನೆ.

ಈ ತಾಲೂಕಿನವನು ಸ್ವಾಭಿಮಾನಿ ನಡಿಗೆ ಮಾಡ್ತಿದ್ದಾನೆ. ಆವತ್ತು ಕಾಲುಬಾಯಿ ಜ್ವರ ಬಂದು ಹಸುಗಳು ಸತ್ತಾಗ ಎಲ್ಲಿದ್ರಿ ನೀವೆಲ್ಲ.

ಈ ನಾಮನಿರ್ದೇಶಿತ ಸದಸ್ಯ ಲಿಂಗೇಶ್ ಕುಮಾರ್ ಎಲ್ಲಿದ್ದ. ಈ ಮಹಾನುಭಾವ ಯೋಗೇಶ್ವರ್ ಈಗ ಸ್ವಾಭಿಮಾನಿ ನಡಿಗೆ ಅಂತ ಮಾಡ್ತಿದ್ದಾನೆ. ಏನೋ ಉದುರಿಸಿಬಿಡ್ತಿನಿ ಅಂತ. ಇಂಥ ಪೋಳ್ಳು ಮಾತುಗಳನ್ನ ಜನ ನಂಬಲ್ಲ ಎಂದು ಸ್ಥಳೀಯ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net