ಮೋದಿ ರಾಜ್ಯ ಭೇಟಿಗೆ ಎಚ್​ಡಿಕೆ ವ್ಯಂಗ್ಯಕಾಮಗಾರಿ ಉದ್ಘಾಟನೆಗೆ ಪ್ರಧಾನಿ ಕರೆಸುತ್ತಿದ್ದಾರೆ

25-03-rama-hdk
Published on

ರಾಮನಗರ

ಶಾಸಕರು, ಸಚಿವರು ಮಾಡುವ ಉದ್ಘಾಟನೆಯನ್ನು ಪ್ರಧಾನಿ ಕೈಯಲ್ಲಿ ಮಾಡಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಭೇಟಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ತಾಲೂಕಿನ ಜಾಲಮಂಗಲದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕರು, ಸಚಿವರು ಮಾಡುವ ಉದ್ಘಾಟನೆಗೆ ಮೋದಿ ಅವರನ್ನು ಕರೆಸುತ್ತಿದ್ದಾರೆ. ಮೋದಿ ಬಂದು ಶಂಕುಸ್ಥಾಪನೆ ಮಾಡಿ ಹೋಗ್ತಾರೆ. ಕೋವಿಡ್​ ಇದ್ದಾಗ ಬರಲಿಲ್ಲ, ಪ್ರವಾಹ ಬಂದಾಗ ಬರಲಿಲ್ಲ. ಈಗ ಕರ್ನಾಟಕದ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆ ಎಂದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಘೋಷಣೆ ಮಾಡದೇ ತಂತ್ರಗಾರಿಕೆ ಮಾಡಲಾಗುತ್ತಿದೆ. ಆದರೆ ಇದರಿಂದ ನನ್ನನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಜನ ನನ್ನನ್ನು ಫ್ರೀ ಬಿಟ್ಟಿದ್ದಾರೆ. ಚನ್ನಪಟ್ಟಣದ ಕಾರ್ಯಕರ್ತರು ರಾಜ್ಯ ಕಟ್ಟುವ ಕೆಲಸ ಕೊಟ್ಟಿದ್ದಾರೆ. ರಾಮನಗರ, ಚನ್ನಪಟ್ಟಣ, ಮಾಗಡಿ ಜನರು ಮನೆ ಮಗನಂತೆ ನೋಡುತ್ತಿದ್ದಾರೆ. ಯಾರು ಏನೇ ಅಪಪ್ರಚಾರ ಮಾಡಿದ್ರೂ ಜನ ಕಿವಿಕೊಡಲ್ಲ. ಜನರೇ ನನಗೆ ರಕ್ಷಣೆ ಕೊಡುತ್ತಾರೆ. ಎಲ್ಲವನ್ನೂ ಜನರಿಗೆ ಬಿಟ್ಟು ನಾನು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಕಾಂಗ್ರೆಸ್​ನಿಂದ ಯಾರೇ ನಿಂತರೂ ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.

ರಾಮನಗರದಲ್ಲಿ ನಮ್ಮ ವಿರುದ್ಧ ಯಾರೇ ಅಭ್ಯರ್ಥಿಯಾದರೂ, ಕಣಕ್ಕಿಳಿಯಲು ತಯಾರಾಗಿದ್ದೇನೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.  ಚನ್ನಪಟ್ಟಣ ಕಾಂಗ್ರೆಸ್​ ಅಭ್ಯರ್ಥಿ ಅಂತಿಮಗೊಳಿಸದ ಬಗ್ಗೆ ತಮ್ಮದೇ ರೀತಿ ವ್ಯಾಖ್ಯಾನ ಮಾಡಿದ ನಿಖಿಲ್​, ರಾಮನಗರ ಜಿಲ್ಲೆ ಜನತೆ ದೇವೇಗೌಡರ ಮೇಲೆ ಇಟ್ಟಿರುವ ಗೌರವ ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಚನ್ನಪಟ್ಟಣ ಜೆಡಿಎಸ್​ ಕಾರ್ಯಕರ್ತರು ಉತ್ಸಾಹಕರಾಗಿ ಸಜ್ಜಾಗಿದ್ದಾರೆ. ಇತಿಹಾಸದಲ್ಲಿ ಚನ್ನಪಟ್ಟಣಕ್ಕೆ ಒಂದೂವರೆ ಸಾವಿರ ಕೋಟಿ ರೂ. ಅನುದಾನ ತಂದಿರಲಿಲ್ಲ. ಈ ಕೆಲಸವನ್ನು ಕುಮಾರಸ್ವಾಮಿ ಅವರು ಮಾಡಿದ್ದಾರೆ ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್​ಡಿಕೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಜಿಲ್ಲೆಗೆ ಶಂಕುಸ್ಥಾಪನೆ ಮಾಡುವ ಬರುವ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಎಲ್ಲಿಗೆ ಹೋಗಿತ್ತು ಎಂದು ಲೇವಡಿ ಮಾಡಿದರು. ಸಿಎಂ ಸೋಮವಾರ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮಾಡಲು ಬರುತ್ತಿದ್ದಾರೆ. 2006ರಲ್ಲಿ ಘೋಷಣೆಯಾದ ಯೋಜನೆ ಇಷ್ಟು ವರ್ಷ ಏನೂ ಮಾಡದೆ ಈಗ ಕಲ್ಲು ನಡೆಲು ಬರುತ್ತಿದ್ದಾರೆ ಎಂದು ಟೀಕಿಸಿದರು.

ಮಾವು ಸಂಸರಣ ಟಕ, ಹೆಟೆಕ್​ ಮಾರುಕಟ್ಟೆ ನಿರ್ಮಾಣ ಯೋಜನೆ ಇವುಗಳಿಗೆ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಈಗ ಅಲ್ಲಿ ಒಂದು ಕಲ್ಲು ಮಾತ್ರ ಇರಲಿದೆ. ನಂತರ ಬರುವ ಸರ್ಕಾರಗಳೇ ಆ ಕೆಲಸಗಳನ್ನು ಮಾಡಬೇಕು ಎಂದರು.

ಹಿಂದೆ ನಮ್ಮ ಸರ್ಕಾರವನ್ನು ಅ-ಧಿಕಾರದಿಂದ ತೆಗೆಯುವ ವೇಳೆ ಮಾಗಡಿ ಶಾಸಕ ಎ.ಮಂಜುನಾಥ್​ ಅವರಿಗೂ 30 ಕೋಟಿ ಆರ್​ ನೀಡಲಾಗಿತ್ತು. ಆದರೆ ಅವರು ಇದನ್ನು ತಿರಸ್ಕರಿಸಿದ್ದರು. ಇವರನ್ನು ಮತ್ತೊಮ್ಮೆ ನನ್ನ ಜೊತೆ ಕೆಲಸ ಮಾಡಲು ವಿಧನಸೌಧಕ್ಕೆ ಕಳುಹಿಸಿಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ನಾವು ಹಣ ಆಸ್ತಿ ಮಾಡಲು ರಾಜಕೀಯ ಮಾಡುತ್ತಿಲ್ಲ. ಬಡವರ ಬದುಕು ಕಟ್ಟಿಕೊಡಲು ರಾಜಕಾರಣ ಮಾಡುತ್ತಿದ್ದೇವೆ. ಪಂಚರತ್ನ ಯೋಜನೆಗಳ ಮೂಲಕ ಗ್ರಾಮೀಣರ ಬದುಕುಗಳನ್ನು ಸುಧಾರಿಸುತ್ತೇವೆ. ಜೆಡಿಎಸ್​ ಅ-ಕಾರಕ್ಕೆ ಬಂದರೆ ಹಾಲಿನ ಪ್ರೋತ್ಸಾಹ ಧನವನ್ನು ರೂ.8ಕ್ಕೆ ಏರಿಕೆ ಮಾಡಲಾಗುವುದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net