ತಾಲೂಕಿನ ರಸ್ತೆ ಜಕ್ಕಸಂದ್ರ ಗ್ರಾಮದ ಮಾರಮ್ಮ ದೇಗುಲ ಮತ್ತು ಬಸವೇಶ್ವರ ದೇವಸ್ಥಾನಕ್ಕೆ ಬೀಗ ಹೊಡೆದು ನುಗ್ಗಿರುವ ಕಳ್ಳರು ೨ ದೇಗುಲದಲ್ಲಿದ್ದ ಹುಂಡಿಯನ್ನು ಹೊತ್ತೊಯ್ದಿದ್ದಾರೆ.
ಗ್ರಾಮದ ಮಧ್ಯ ಭಾಗದಲ್ಲಿಯೇ ಇರುವ ದೇವಸ್ಥಾನಗಳಿಗೆ ಮಂಗಳವಾರ ಬೆಳಗಿನ ಜಾವ ನುಗ್ಗಿರುವ ಕಳ್ಳರು ಈ ಕೃತ್ಯ ಎಸಗಿದ್ದು ಹುಂಡಿಯನ್ನು ಹೊತ್ತೊಯ್ದು ಅದರಲ್ಲಿದ್ದ ಹಣ ತೆಗೆದುಕೊಂಡು ಖಾಲಿ ಹುಂಡಿಯನ್ನು ಊರಾಚೆ ಬಿಸಾಡಿ ಹೋಗಿದ್ದಾರೆ.
ಈ ಸಂಬಂಧ ಹಾರೋಹಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರನರಣ ದಾಖಲಾಗಿದ್ದು ಶೀಘ್ರವಾಗಿ ಕಳ್ಳರ ಪತ್ತೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.