ಪಿಡಿಓ ಲಾಗಿನ್ ಐಡಿಗೆ ಅತಿಕ್ರಮ ಮಾಡಲು ವಿಫಲ ಯತ್ನ

Cyber Crime
Published on


ರಾಮನಗರ: ತಾಲೂಕಿನ ಹರೀಸಂದ್ರ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯ ಇ ಸ್ವತ್ತು ಲಾಗಿನ್ ಅನ್ನು ದುರ್ಬಳಕೆ ಮಾಡಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.


ಈ ಸಂಬಂಧ ಗ್ರಾಮ ಪಂಚಾಯತಿ ಪಿಡಿಓ ದಾಯನಂದ ಸಾಗರ್ ಎಚ್.ಕೆ. ಸಿಇಎನ್ ಠಾಣೆಗೆ ಗುರುವಾರ ದೂರು ನೀಡಿದ್ದಾರೆ.

 ಜಿಲ್ಲಾ ಕೇಂದ್ರ ರಾಮನಗರಕ್ಕೆ ಹತ್ತಿರವೇ ಇರುವ ಹರೀಸಂದ್ರ ಗ್ರಾಮ ಪಂಚಾಯಿತಿಯಲ್ಲಿ ದಾಯನಂದ ಸಾಗರ್ ಕಳೆೆದ 15 ತಿಂಗಳಿಂದ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಳೆದ 11 ತಿಂಗಳಿಂದ ವಾರದಲ್ಲಿ 2 ದಿನ ಗರಿಷ್ಠ ಲಾಗಿನ್ ಮಿತಿ ವಿಫಲವಾಗಿದೆ ಎನ್ನುವ ಸಂದೇಶ ತೋರಿಸುತ್ತಿದ್ದು, ಇದು ಅನಾಮದೇಯ ವ್ಯಕ್ತಿಗಳು ತಮ್ಮ ಲಾಗಿನ್ ಐಡಿಯನ್ನು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸುತ್ತಿರುವ ಬಗ್ಗೆ ಅನುಮಾನ ಮೂಡಿಸಿದೆ.  


 ಆರಂಭದಲ್ಲಿ ಇದು ನೆಟ್‌ವರ್ಕ್, ಇಲ್ಲವೇ ಸರ್ವರ್ ಸಮಸ್ಯೆ ಎಂದು ಸುಮ್ಮನಾಗಿದ್ದ ಪಿಡಿಓ ನಂತರ ಈ ವಿಚಾರವನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಇದೇ ವಿಚಾರವಾಗಿ ಜು.11ರಂದು ಬೆಂಗಳೂರಿನ ಎನ್‌ಐಸಿ ಮುಖ್ಯ ಕಚೇರಿಯಲ್ಲಿ ಪರಿಶೀಲನೆ ಮಾಡಿಸಲಾಗಿದೆ. ಅಂದು ಹಲವಾರು ಬಾರಿ ಬೇರೆ ಐಪಿ ಅಡ್ರಸ್‌ಗಳ ಮೂಲಕ ತಮ್ಮ ಐಡಿಗೆ ಲಾಗಿನ್ ಆಗಿ ವಿಫಲವಾಗಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಪಿಡಿಓ ದಾಯನಂದಸಾಗರ್ ಇ ಸ್ವತ್ತು ಖಾತೆಯನ್ನು ನೀಡಲು ತಮಗೆ ನೀಡಿದ್ದ ಐಡಿಯನ್ನು ಭೂಗಳ್ಳರು ದುರ್ಬಳೆ ಮಾಡಿಕೊಂಡು ಇ ಸ್ವತ್ತು ಮಾಡಿರುವ ಬಗ್ಗೆ ಅನುಮಾನವಿದ್ದು, ಅಂತಹ ಭೂಗಳ್ಳರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ  ದೂರಿನಲ್ಲಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net