

* ಜಿಲ್ಲಾ ಸರ್ಕಾರಿ ನೌಕರರ ಸಂದಿಂದ ಅಪರ ಜಿಲ್ಲಾಧಿಕಾರಿಗೆ ಮನವಿ
ರಾಮನಗರ
ಸರ್ಕಾರಿ ನೌಕರರ ಸಂದ ಅಧ್ಯಕ್ಷರು, ಜಿಲ್ಲೆ, ತಾಲೂಕು ಶಾಖೆಗಳನ್ನು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಕೆ.ಸತೀಶ್ ಆಗ್ರಹಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರಿಗೆ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲೆ, ತಾಲೂಕು ಶಾಖೆಗಳ ತೇಜೋವಧೆ ವಾಡುವ ದುರುದ್ದೇಶದಿಂದ ಕೂಡಿದ ಆಧಾರ ರಹಿತ ಆರೋಪಗಳನ್ನು ಮಾಡಿ, ಸಂಟನೆಯ ವಿರುದ್ಧ ಸಾವಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿರುವ ಅಧೀನ ಕಾರ್ಯದರ್ಶಿ ಶಾಂತರಾಮ, ಸಚಿವಾಲಯದ ಶಾಖಾಧಿಕಾರಿ ಗುರುಸ್ವಾಮಿ, ಮೆಹಬೂಬ್ ಪಾಷಾ, ಶಿವರುದ್ರಯ್ಯ, ನಿಂಗೇಗೌಡ ಅವರುಗಳ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಸಂಘದ ಅಧ್ಯಕ್ಷರು ನಕಲಿ ದಾಖಲೆ ಸೃಷ್ಠಿಸಿ ಸಂಘಕ್ಕೆ ಹಾನಿ ಮಾಡಿಲ್ಲ. ಸಂಘಕ್ಕೆ ಆಡಳಿತ ಅಧಿಕಾರಿ ನೇಮಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡಿರುವವರು ಅಧ್ಯಕ್ಷರಲ್ಲಿ ಕ್ಷಮೆ ಕೋರಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಸರ್ಕಾರಿ ನೌಕರರು ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜವಾಬ್ದಾರಿಯುತ ಅಧ್ಯಕ್ಷರ ಮೇಲೆ ಆರೋಪ ಮಾಡುವ ಮುನ್ನ ಯೋಚಿಸಿ, ಆರೋಪಿಸಬೇಕು. ಅದನ್ನು ಬಿಟ್ಟು ನಾಲಿಗೆ ಹರಿಯಬಿಡುವುದು ಸರಿಯಲ್ಲ. ಸಿ.ಎಸ್.ಷಡಾಕ್ಷರಿ ಅವರು ಅಧ್ಯಕ್ಷರಾದ ನಂತರ ಸಂಕ್ಕೆ ಗೌರವ ತಂದಿದ್ದಾರೆ. ಸರ್ಕಾರಿ ನೌಕರರ ಧ್ವನಿಯಾಗಿದ್ದಾರೆ. ನೌಕರರ ಶಾಶ್ವತ ಸಮಸ್ಯೆಗೆ ಪರಿಹಾರ ನೀಡಿದ್ದಾರೆ. ರಾಜ್ಯಾದ್ಯಂತ ಸಂಘಗಳನ್ನು ಬಲಿಷ್ಠಗೊಳಿಸಿದ್ದಾರೆ. ಅಂಥವರ ವಿರುದ್ಧ ಆರೋಪ ವಾಡುವುದು ಸರಿಯಲ್ಲ. ಇದನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘ ಖಂಡಿಸುತ್ತದೆ ಎಂದರು. ಸಂಘದ ಶಿವಸ್ವಾಮಿ, ರಾಜಶೇಖರ್ ಮೂರ್ತಿ, ಡಾ.ರಂಗಪ್ಪ, ಪುಟ್ಟಸ್ವಾಮಿಗೌಡ, ದರ್ಶನ್, ಹರ್ಷ ಮುಂತಾದವರು ಇದ್ದರು.