

ಗಂಗಾಧರ್ ಬೈರಾಪಟ್ಟಣ ರಾಮನಗರ
ಮಳೆ ಅವಾಂತರಕ್ಕೆ ಜಿಲ್ಲಾ ಕೇಂದ್ರ ತತ್ತರಿಸಿದ್ದು, ಕಸದ ಸಮಸ್ಯೆಯೂ ವ್ಯಾಪಕವಾಗಿದೆ. ಜಿಲ್ಲೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕಸದ ಸಮಸ್ಯೆ ಇದೆ. ಆದರೆ, ಸಮಸ್ಯೆ ಬಗೆಹರಿಸಲು ಜನಪ್ರತಿನಿಧಿಗಳು ವಿಫಲವಾದ ಹಿನ್ನೆಲೆಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಸಮಸ್ಯೆ ವ್ಯಾಪಕ ರೂಪ ಪಡೆದುಕೊಂಡಿದೆ.
ಜಿಲ್ಲಾ ಕೇಂದ್ರದಲ್ಲಿ ಮಳೆ ಆರಂಭಗೊಂಡ ದಿನದಿಂದಲೂ ಕಸ ಸಂಗ್ರಹಣೆ ಸ್ಥಗಿತಗೊಳಿಸಲಾಗಿದೆ. ಪ್ರತಿ ವಾರ್ಡ್ನ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿತ್ತು. ಎರಡು ದಿನಕ್ಕೊಮ್ಮೆ ಈ ಕಾರ್ಯ ನಡೆಯುತ್ತಿತ್ತು. ಆದರೆ ಮಳೆ ಕಾರಣದಿಂದಾಗಿ ಪ್ರತಿ ಮನೆಯಲ್ಲಿಯೂ ಕಸದ ರಾಶಿಯೇ ಬಿದ್ದಿದೆ. ಕೆಲವರು ಕಸವನ್ನು ರಸ್ತೆಯಲ್ಲಿ ಬಿಸಾಡಿ ಹೋಗುತ್ತಿದ್ದರೆ, ಕೆಲವು ಮನೆಗಳಲ್ಲಿ ಕಸ ಸಂಗ್ರಹ ವಾಹನಕ್ಕಾಗಿ ಕಾಯುತ್ತಿದ್ದಾರೆ.
ಕೇಂದ್ರಕ್ಕೆ ದಾರಿ ಬಂದ್
ನಗರದ ಕಸ ವಿಲೇವಾರಿಗೆ ನಗರಸಭೆ ಕೆಲವು ಜಾಗಗಳನ್ನು ಗುರುತಿಸಿಕೊಂಡಿದ್ದು, ಲಾರಿಗಳು ಹಾಗೂ ಇತರ ವಾಹನಗಳ ಮೂಲಕ ಕಸ ಸಾಗಿಸಲಾಹುತ್ತಿತ್ತು. ಆದರೆ ಮಳೆಯಿಂದಾಗಿ ಇಲ್ಲಿಗೆ ತೆರಳುವ ಮಾರ್ಗಗಳು ಗುಂಡಿಮಯವಾಗಿದ್ದು, ವಾಹನಗಳು ತೆರಳಲು ಸಾಧ್ಯವಾಗದ ಕಾರಣ ಕಸ ಸಂಗ್ರಹಣೆ ಕಾರ್ಯಕ್ಕೆ ಸದ್ಯದ ಮಟ್ಟಿಗೆ ಕೊಕ್ ನೀಡಲಾಗಿದೆ.
ಸಿಬ್ಬಂದಿ ಬಳಕೆ
ಮಳೆಯಿಂದ ಉಂಟಾಗುವ ಅವಡಗಳನ್ನು ನಿರ್ವಹಿಸಲು ನಗರಸಭೆ ಪೌರ ಕಾರ್ಮಿಕರನ್ನು ಬಳಕೆ ಮಾಡಿಕೊಳ್ಳುತ್ತಿರುವ ಕಾರಣದಿಂದಾಗಿ ಕಸ ಸಂಗ್ರಹಣೆ ವಿಳಂಬವಾಗಿದೆ ಎಂದು ನಗರಸಭೆ ಅಧಿಕಾರಿಗಳು ಹೇಳಿದ್ದಾರೆ. ನಗರಸಭೆಯಲ್ಲಿ ಒಟ್ಟು 120 ಪೌರ ಕಾರ್ಮಿಕರಿದ್ದು, ಇವರನ್ನು ಮೂರು ಪಾಳಿಗಳಲ್ಲಿ ತುರ್ತು ನಿರ್ವಹಣೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಕಸ ಸಂಗ್ರಹಣೆ ಸಾಧ್ಯವಾಗುತ್ತಿಲ್ಲ ಎನ್ನುವ ಉತ್ತರ ಅಧಿಕಾರಿಗಳಿಂದ ಬರುತ್ತಿದೆ.
ಗಬ್ಬು ನಾರುತ್ತಿದೆ ನಗರ
ವಾರದಿಂದ ಕಸ ಸಂಗ್ರಹಣ ಮಾಡದಿರುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿ ಕಾಣುತ್ತಿದೆ. ಇನ್ನು ಶುಕ್ರವಾರ ವರಮಹಾಲಕ್ಷಿ$್ಮ ಹಬ್ಬವೂ ನಡೆದಿದ್ದು ತ್ಯಾಜ್ಯ ರಸ್ತೆಗೆ ಬಿದ್ದಿದೆ. ಬಹುತೇಕ ಎಲ್ಲ ವಾರ್ಡ್ಗಳಲ್ಲಿ ಅಲ್ಲಲ್ಲಿ ಕಸದ ರಾಶಿಯೇ ತುಂಬಿ ತುಳುಕುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿಯೂ ಎದುರಾಗಿದೆ.
ಮಳೆಯಿಂದಾಗಿ ಕಸ ಸಂಗ್ರಹಣೆ ಸಾಧ್ಯವಾಗಿರಲಿಲ್ಲ. ಸಿಬ್ಬಂದಿಯನ್ನು ಮಳೆ ಅವಡಗಳ ತುರ್ತು ನಿರ್ವಹಣೆಗೆ ಪಾಳಿಯಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಶ್ರೀವೇ ಕಸ ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು.
ಬಿ. ನಂದಕುಮಾರ್ ಆಯುಕ್ತ, ರಾಮನಗರ ನಗರಸಭೆ
ಮಳೆಯಿಂದಾಗಿ ಕಸ ಸಂಗ್ರಹ ವಿಳಂಬವಾಗಿದೆ. ಶನಿವಾರದಿಂದಲೇ ಕಸ ಸಂಗ್ರಹಿಸಿ ಟಿಪ್ಪರ್ಗಳಲ್ಲಿ ಇಡುವ ಕೆಲಸ ಮಾಡಲಾಗುತ್ತಿದೆ. ಕಸ ವಿಲೇವಾರಿ ಟಕಕ್ಕೆ ತೆರಳುವ ಜಾಗ ಸರಿಪಡಿಸಿಕೊಂಡು ಕಸ ಸಮಸ್ಯೆಗೆ ಮುಕ್ತಿ ನೀಡಲಾಗುವುದು.
ಪಾರ್ವತಮ್ಮ ಅಧ್ಯಕ್ಷೆ, ರಾಮನಗರ ನಗರಸಭೆ