ಕಳೆದ ವರ್ಷ ಸಿಎಂ ಪದಕ ಪಡೆದಿದ್ದ ಫಾರೆಸ್ಟ್​ ಗಾರ್ಡ್​ ನಿಗೂಢ ಸಾವು: ಮದ್ವೆಯಾಗಿ 2 ವರ್ಷಗಳಾಗಿತ್ತು

Forest Gaurd
Published on

ರಾಮನಗರ: ಪಾವಗಡ ಮೂಲದ ಫಾರೆಸ್ಟ್​ ಗಾರ್ಡ್​ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಶ್ರೀನಿವಾಸ್(30) ಮೃತ ವ್ಯಕ್ತಿ. ರಾಮನಗರ ಭಾಗದ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ತಾನು ಉಳಿದುಕೊಂಡಿದ್ದ ಸರ್ಕಾರಿ ಕ್ವಾಟ್ರಸ್​ನಲ್ಲಿ ಫ್ಯಾನ್​ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಶ್ರೀನಿವಾಸ್​ಗೆ ಕಳೆದ‌ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ. ಅಲ್ಲದೆ, ಕಳೆದ ವರ್ಷ ಮುಖ್ಯಮಂತ್ರಿ ಪದಕ ಸಹ ಪಡೆದಿದ್ದರು. ಆದರೆ, ಮನೆಯಲ್ಲಿ ಯಾರು ಇಲ್ಲದ ವೇಳೆ ಅನುಮಾನಾಸ್ಪದ ರೀತಿಯಲ್ಲಿ ಶ್ರೀನಿವಾಸ್​ ಮೃತದೇಹ ಪತ್ತೆಯಾಗಿದೆ.

ಸಾವಿಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಇತ್ತ ಶ್ರೀನಿವಾಸ್​ ಸಾವಿನಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net