ಒಂದೇ ದಿನ 137 ಪ್ರಕರಣ ದಾಖಲು ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ನಿಷೇಧಿತ ವಾಹನಗಳಿಗೆ ದಂಡ

01-08-rama-NH
Published on

ರಾಮನಗರ: ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳ ಸೇರಿದಂತೆ ವಿವಿಧ ಬಗೆಯ ವಾಹನಗಳಿಗೆ ನಿಷೇಧಿಸಿದ ಮೊದಲ ದಿನವೇ 137 ಪ್ರಕರಣ ದಾಖಲು ಮಾಡಿರುವ ರಾಮನಗರ ಪೊಲೀಸರು  ಒಟ್ಟು 68500 ರೂ.ಗಳ ದಂಡ ವಿಧಿಸಿದ್ದಾರೆ. 

ಆ.1 ರಿಂದ ಜಾರಿಗೆ ಬರುವಂತೆ ನೂತನ ದಶಪಥದಲ್ಲಿ ಕೆಲವು ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ನಿಷೇಧಿತ ವಾಹನಗಳ ಸಂಚಾರಕ್ಕೆ ಬ್ರೇಕ್​ ಹಾಕಲಾಗಿತ್ತು. ಇದರ ನಡುವೆಯೂ ಓಡಾಟ ನಡೆಸಿದ 137 ಪ್ರಕರಣಗಳನ್ನು ದಾಖಲಿಸಿಕೊಂಡು ವಾಹನ ಸವಾರರಿಂದ ಒಟ್ಟು 68500 ರೂಗಳ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್​ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net