ರಕ್ತದಾನ ಮಾಡುವಂತೆ ಪ್ರೇರೇಪಿಸಿಮಾಜಿ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಶಿಬಿರ

RMGm-Ph-01-X MLA K.Raju Birth Day Programme-Blood Camp-Ramanagara News-1-6-23
Published on

ರಾಮನಗರ

ಮಾಜಿ ಶಾಸಕ ಕೆ. ರಾಜು ಅವರ 66ನೇ ಜನ್ಮದಿನದ ಅಂಗವಾಗಿ ರೋಟರಿ ಸಿಲ್ಕ್​ ಸಿಟಿ, ಕೆ. ರಾಜು ಅಭಿಮಾನಿ ಬಳಗ, ಬೆಳ್ಳಿ ರಕ್ತ ನಿಧಿ ಇವರ ಸಹಯೋಗದಲ್ಲಿ ಗುರುವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ರೋಟರಿ ಸಿಲ್ಕ್​ ಸಿಟಿ ಅಧ್ಯಕ್ಷ ಆರ್​. ಶಿವರಾಜು, ರಕ್ತವು ಮಾನವನಿಗೆ ಪ್ರಮುಖವಾಗಿದೆ. ರಕ್ತದ ಕೊರತೆ ಹಲವಾರು ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ. ಸ್ಥಳಿಯವಾಗಿಯೇ ಬ್ಲಡ್​ ಬ್ಯಾಂಕ್​ಗಳಲ್ಲಿ ಜನರಿಗೆ ರಕ್ತ ಸಿಗಬೇಕು, ಜನರ ಪ್ರಾಣ ಉಳಿಸಲು ನೆರವಾಗಬೇಕು. ರಕ್ತದಾನ ಮಾಡುವಂತೆ ಜನರನ್ನು ಪ್ರೇರೇಪಿಸಬೇಕು. ಯುವ ಪೀಳಿಗೆಗೆ ರಕ್ತದಾನದ ಮಹತ್ವ ತಿಳಿಸಬೇಕು ಎಂದರು.

ಕೆ. ರಾಜು ಅಭಿಮಾನಿ ಬಳಗ ಅವರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ಉತ್ತಮ ಕೆಲಸ ಮಾಡಿದೆ. ಜತೆಗೆ ರೋಟರಿ ಸಂಸ್ಥೆ ಮತ್ತು ಬೆಳ್ಳಿ ರಕ್ತನಿಧಿ ಕೈಜೋಡಿಸಿದೆ ಎಂದರು. 50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ಅಭಿಮಾನಿಗಳು, ಹಿತೈಷಿಗಳು ರಕ್ತದಾನ ಮಾಡುವ ಮೂಲಕ ರಾಜು ಅವರ ಸ್ವಗೃಹದಲ್ಲಿ ಶುಭ ಕೋರಿದರು. ಶಾಸಕ ಇಕ್ಬಾಲ್​ ಹುಸೇನ್​ ಕೂಡ ಆಗಮಿಸಿ ರಾಜು ಅವರಿಗೆ ಕೇಕ್​ ತಿನ್ನಿಸಿ ಹೂಗುಚ್ಚ ನೀಡಿ ಶುಭ ಹಾರೈಸಿದರು.

ಕೆಎಂಎಫ್​ ಮಾಜಿ ಅಧ್ಯಕ್ಷ ಪಿ. ನಾಗರಾಜು, ನಗರಸಭೆ ಸದಸ್ಯ ಶೇಷಾದ್ರಿ, ಜಿಪಂ ಮಾಜಿ ಅಧ್ಯಕ್ಷ ಕೆ. ರಮೇಶ್​, ಗ್ರಾಮಾಂತರ ಬ್ಲಾಕ್​ ಕಾಂಗ್ರೇಸ್​ ಅಧ್ಯಕ್ಷ ವಿ.ಎಚ್​. ರಾಜು, ನಗರ ಘಟಕ ಅಧ್ಯಕ್ಷ ಎ.ಬಿ. ಚೇತನ್​ ಕುಮಾರ್​, ತಾಪಂ ಮಾಜಿ ಅಧ್ಯಕ್ಷರಾದ ಪ್ರಾಣೇಶ್​, ಭದ್ರಯ್ಯ, ತಾಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ರೋಟರಿ ಕಾರ್ಯದರ್ಶಿ ಇಶಾಂತ್​, ನಿರ್ದೇಶಕರಾದ ರಾಮಲಿಂಗಯ್ಯ, ಶ್ರೀಧರ್​ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net