ಆನೆ ದಾಳಿಗೆ ರೈತ ಮಹಿಳೆ ಬಲಿ

Elephant
Published on

ರಾಮನಗರ: ತೋಟದ ಮನೆಯಲ್ಲಿ ಹಾಲು ಕರೆಯಲು ತೆರಳುತ್ತಿದ್ದ ರೈತ ಮಹಿಳೆ ಆನೆ ದಾಳಿಗೆ ಬಲಿಯಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ಚೆನ್ನಿಗನಹೊಸಳ್ಳಿಯಲ್ಲಿ ನಡೆದಿದೆ.

ಗ್ರಾಮದ ಸಿದ್ದಪ್ಪಾಜಿ ದೇವಾಲಯದ ಅರ್ಚಕ ಚನ್ನಪ್ಪ ಎಂಬುವರ ಪತ್ನಿ ಚನ್ನಮ್ಮ (55) ಆನೆ ದಾಳಿಗೆ ಬಲಿಯಾದವರು.

ಮಂಗಳವಾರ ಬೆಳಿಗ್ಗೆ ಸುಮಾರು 5.30ರಲ್ಲಿ ತಮ್ಮ ತೋಟದ ಮನೆಯಲ್ಲಿದ್ದ ಕೊಟ್ಟಿಗೆ ಹಾಲು ಕರೆಯಲು ತೆರಳುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಆನೆಯೊಂದು ಚನ್ನಮ್ಮ ಅವರ ಮೇಲೆ ದಾಳಿ ನಡೆಸಿದೆ. ಅಲ್ಲದೆ, ಅವರನ್ನು ದೂರಕ್ಕೆ ಎಸೆದಿದ್ದು, ನಂತರ ತುಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ತೆಂಗಿನಕಲ್ಲು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ನಿರಂತರವಾಗಿ ಆನೆ ದಾಳಿ ನಡೆಯುತ್ತಲೇ ಇದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಇದೀಗ ಮತ್ತೊಬ್ಬ ರೈತ ಮಹಿಳೆ ಬಲಿಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net