ರಾಮನಗರದಲ್ಲಿ ಆನೆ ದಾಳಿಗೆ ಮತ್ತೊಬ್ಬ ಬಲಿ ಚನ್ನಪಟ್ಟಣದ ವಿರುಪಸಂದ್ರ ಬಳಿ ಘಟನೆ

elephant
representative picture
Published on

ರಾಮನಗರ: ಜಿಲ್ಲೆಯಲ್ಲಿ ಗಜರಾಯನ ಅರ್ಭಟ ಮುಂದುವರೆದಿದೆ.

ಕೇವಲ ಮೂರು ದಿನಗಳ ಅಂತರಲ್ಲಿ ಮತ್ತೊಮ್ಮ ವ್ಯಕ್ತಿ ಆನೆ ದಾಳಿಗೆ ಬದಲಿಯಾಗಿದ್ದಾರೆ.  ಶನಿವಾರ ಮುಂಜಾನೆ ಒಂಟಿ ಸಲಗದ ದಾಳಿಗೆ ಚನ್ನಪಟ್ಟಣ ತಾಲೂಕಿನ ಮತ್ತೊಂದು ಬಲಿಯಾಗಿದೆ.

ತಾಲೂಕಿನ ವಿರುಪಸಂದ್ರ ಗ್ರಾಮದ ವೀರಭದ್ರಯ್ಯ (50) ಎಂಬುವವರು ಶನಿವಾರ‌ ಮುಂಜಾನೆ ಒಂಟಿ ಸಲಗದ ದಾಳಿಗೆ ತುತ್ತಾಗಿರುವ ದುರ್ಧೈವಿ. ಗ್ರಾಮದ ವಿರುಪಸಂದ್ರ ಗ್ರಾಮದ ಲೋಕೇಶ್ ಎಂಬುವವರು ತಮ್ಮ ಮಾವಿನ ತೋಟವನ್ನು ಖಲೀಂ ಎಂಬುವವರಿಗೆ ಗುತ್ತಿಗೆ ನೀಡಿದ್ದರು. ಈ ತೋಟದ ಕಾವಲಿಗೆ ವೀರಭದ್ರಯ್ಯ ತನ್ನ ಪತ್ನಿ ಸಮೇತವಾಗಿ ನಿಯೋಜನೆಗೊಂಡಿದ್ದರು.

ಶನಿವಾರ ಮುಂಜಾನೆ ಎದ್ದು ಎಂದಿನಂತೆ ತೋಟದ ಒಳಗೆ ಹೋದಾಗ ಹಠಾತ್ತನೆ ಎದುರಾದ ಒಂಟಿ ಸಲಗ ಇವರ ಮೇಲೆ ದಾಳಿ ಮಾಡಿದೆ. ಸೊಡಿಲಿನಿಂದ ಎಸೆದು, ತಲೆಯ ಮೇಲೆ ಕಾಲಿಟ್ಟು ತುಳಿದು ಸಾಯಿಸಿದೆ. ಸ್ಥಳಕ್ಕೆ ಅಕ್ಕೂರು ಪೊಲೀಸರು ಮತ್ತು ಅರಣ್ಯ ಇಲಾಖೆ ಭೇಟಿ ನೀಡಿದ್ದಾರೆ.

ಕಳೆದ ಮಂಗಳವಾರ ಕಬ್ಬಾಳು ಅರಣ್ಯ ಪ್ರದೇಶ ವ್ಯಾಪ್ತಿಯ ಕಂಚನಹಳ್ಳಿ ಸಮೀಪ ಕಾಳಯ್ಯ ವ್ಯಕ್ತಿ ಆನೆ ದಾಳಿಗೆ ಬಲಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net