ಕೀರಣಗೆರೆಯಲ್ಲಿ ಹುಚ್ಚುನಾಯಿಗಳ ಅಟ್ಟಹಾಸ12 ಹಸುಗಳು, 6 ಮಂದಿಗೆ ಗಾಯ

Dog1
Published on

ಹಾರೋಹಳ್ಳಿ(ರಾಮನಗರ): ಒಂದು ವಾರದಿಂದೀಚೆಗೆ ರಸ್ತೆಯಲ್ಲಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿರುವ 3-4 ಹುಚ್ಚು ನಾಯಿಗಳು 12 ಹಸುಗಳು, 6 ಮಂದಿಯನ್ನು ಕಚ್ಚಿ ಗಾಯಗಳಾಗಿರುವುದು ಹಾರೋಹಳ್ಳಿ ತಾಲೂಕಿನ ಕೀರಣಗೆರೆ ಗ್ರಾಮದಲ್ಲಿ ನಡೆದಿದೆ.

ಕೀರಣಗೆರೆ ಗ್ರಾಮದ ಅನುಸೂಯ ಗುರುವಾರ ನಾಯಿ ಕಡಿತಕ್ಕೆ ಒಳಗಾಗಿ ಗಾಯಗೊಂಡಿದ್ದಾರೆ. ವಾರದಿಂದೀಚೆಗೆ ಚೋಳೂರಯ್ಯ, ಚಿಕ್ಕತಾಯಮ್ಮ, ಹನುಮೇಗೌಡ, ಬಸವರಾಜು, ಹನುಮೇಗೌಡ, ಎಂಬುವವರ ಮೇಲೆ ಹುಚ್ಚು ನಾಯಿಗಳು ಎರಗಿ ಗಾಯಗೊಳಿಸಿವೆ. ಅಲ್ಲದೇ ಹಸುಗಳ ಮೇಲೂ ದಾಳಿ ನಡೆಸಿರುವ ನಾಯಿಗಳು 12 ಹಸುಗಳಿಗೂ ಕಡಿದಿವೆ. ಗ್ರಾಮದಲ್ಲಿ ಬೀದಿ ನಾಯಿಗಳ ಉಪಟಳ ವಿಪರೀತವಾಗಿದ್ದು, ಜನ, ವಿದ್ಯಾರ್ಥಿಗಳು ಮನೆಯಿಂದ ಹೊರ ಬರಲು ಭಯಪಡುವಂತಾಗಿದೆ. ಕೂಡಲೇ ನಾಯಿಗಳಿಂದ ರಕ್ಷಣೆ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಿಕ್ಕ ಸಿಕ್ಕವರ ಮೇಲೆ ಎರಗಿರುವ ಹುಚ್ಚು ನಾಯಿಗಳು ಬೆನ್ನು, ತೊಡೆ, ಕೈ, ಕಾಲು, ಮುಖದ ಭಾಗಗಳನ್ನು ಕಚ್ಚಿವೆ. ಕಚ್ಚಿವೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ವಿಷಯ ತಿಳಿಸಿದ್ದಾರೆ. ನಾಯಿ ಕಡಿತದಿಂದ ಗಾಯಗೊಂಡಿರುವವರಿಗೆ ಸಮೀಪದ ದಯಾನಂದ ಸಾಗರ್ ಆಸ್ಪತ್ರೆ ಹಾಗೂ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net