ದೊಡ್ಡ ಗಣಪತಿಯ ವಿಸರ್ಜನೆ

RMGm-Ph-001-Ramanagara Doddaganesha Visarjane Rangarayaradoddi Kere-18-9-2022
Published on

ರಾಮನಗರ

ನಗರದ ಹೃದಯ ಭಾಗದ ಮುಖ್ಯರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ರಾಮನಗರದ ದೊಡ್ಡ ಗಣಪತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿದ್ಯಾಗಣಪತಿ ಮೂರ್ತಿಯನ್ನು ಭಾನುವಾರ ರಂಗರಾಯರದೊಡ್ಡಿ ಕೆರೆಯಲ್ಲಿ ವಿಸರ್ಜನೆ ವಾಡಲಾಯಿತು.

ವಿದ್ಯಾಗಣಪತಿ ಸಂದಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶನಿವಾರ ರಾತ್ರಿ 9 ಗಂಟೆ ವೇಳೆಗೆ ಮೆರವಣಿಗೆಯಲ್ಲಿ ಆಸ್ಥಾನ ಮಂಟಪದಿಂದ ಕೊಂಡೊಯ್ಯಲಾಯಿತು. ರಾಮನಗರ ವೃತ್ತ ನಿರೀಕ್ಷಕ ನರಸಿಂಹಮೂರ್ತಿ, ರಾಮನಗರ ಸಂಚಾರಿ ಠಾಣೆ ಸಬ್‌ಇನ್‌ಸ್ಪೆಕ್ಟರ್ ಸರಸ್ವತಿ, ವಿದ್ಯಾಗಣಪತಿ ಸೇವಾ ಸಂದ ಕೃಷ್ಣಮೂರ್ತಿ ಮತ್ತಿತರ ಗಣ್ಯರು ಅಲಂಕೃತಗೊಂಡ ಮೆರವಣಿಗೆ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನಿಖಿಲ್ ಭೇಟಿ: ಶನಿವಾರ ರಾತ್ರಿ ಚಾಮುಂಡೇಶ್ವರಿ ಬಡಾವಣೆ ವ್ಯಾಪ್ತಿಯಲ್ಲಿ ಮೆರವಣಿಗೆ ಸಾಗುವಾಗ ಜೆಡಿಎಸ್ ಯುವ ಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮರಸ್ವಾಮಿ ಭೇಟಿ ನೀಡಿ ಗಣಪತಿಗೆ ಪೂಜೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಜನಪದ ಕಲಾಮೇಳಗಳು ಮೇಳೈಸಿದವು. ನಗರದ ಮುಖ್ಯರಸ್ತೆ, ಬಾಲಗೇರಿ, ಕಾಯಿಸೊಪ್ಪಿನಬೀದಿ, ಕಾಮಣ್ಣನಗುಡಿ ಸರ್ಕಲ್, ಎಂಜಿ ರಸ್ತೆ, ಐಜೂರು, ಮಲ್ಲೇಶ್ವರ ಬಡಾವಣೆ ಮುಖ್ಯರಸ್ತೆಯಲ್ಲಿ ಗಣೇಶ ಮೆರವಣಿಗೆ ಸಂಚರಿಸಿತು. ಇದೇ ವೇಳೆ ರಾಮನಗರ ಎಂ.ಜಿ. ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನೂ ಮೆರವಣಿಗೆ ವಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net