ರಾಮನ ಪೂಜೆ ಮಾಡುವವರು ಪಬ್ಲಿಕ್ ನಲ್ಲಿ ಹೇಳ್ಕೊಂಡು ತಿರುಗಲ್ಲ. ದೇವರು ಪೂಜೆ ಮಾಡೋದನ್ನ ಯಾರು ಸಹ ವೈಭವೀಕರಿಸಿಕೊಳ್ಳಲ್ಲ. ಇದು ಚುನಾವಣೆ ಗಿಮಿಕ್, ಚುನಾವಣೆ ಹತ್ತಿರ ಬಂದಾಗ ಹೀಗೆ ಮಾಡುತ್ತಾರೆ. ರಾಮನ ದೇವಸ್ಥಾನನಾದ್ರೂ ಕಟ್ಟಲಿ, ಹನುಮಂತ, ಶಿವ, ಲಕ್ಷ್ಮಿ ಸೇರಿದಂತೆ ಎಲ್ಲರ ದೇವಸ್ಥಾನ ಕಟ್ಟಲಿ. ಜೆಲ್ಲೆಯಲ್ಲಿ ಹಲವು ಕಡೆ ಬೆಟ್ಟ, ದೇವಾಲಯ ಇದೆ. ಎಲ್ಲಕಡೆನೂ ಬಂದು ದೇವಾಲಯ ಕಟ್ಟಲಿ, ನಾವೂ ಸಹ ಬೆಂಬಲ ಕೊಡ್ತಿವಿ. ಅವರು ದೇವಸ್ಥಾನ ಕಟ್ಟುತ್ತೇವೆ ಎಂದರೆ ನಾವು ಬೇಡ ಅನ್ನೋಕೆ ಆಗುತ್ತಾ? ಅಶ್ವಥ್ ನಾರಾಯಣ್ ಒಂದು ದೇವಸ್ಥಾನನಾದ್ರೂ ಕಟ್ಟಿದ್ದಾನಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.