ಸಿಎಂ ಆಗಿದ್ದಾಗ ಮನೆ ಕೊಡದವರು ಈಗ ಪಂಚರತ್ನ ಕೊಡುತ್ತಾರಂತೆ ಡಿ.ಕೆ.ಸುರೇಶ್​ ಆಕ್ರೋಶ

Kailancha-Ph-01-Congress Prachara Dk Suresh kailancha-4-5-2023
Published on

ರಾಮನಗರ:

ಬಿಜೆಪಿ ಸರ್ಕಾರ ಅಡುಗೆ ಅನಿಲ, ಖಾದ್ಯ ತೈಲ ಬೆಲೆ ಗಗನಕ್ಕೇರಿಸಿ, ಉಪು$್ಪ, ಸಕ್ಕರೆ, ಗೋಧಿಗೆ, ಮಾತ್ರೆ, ಕಡ್ಲೆಪುರಿ, ಗೊಬ್ಬರ, ಚಾಕೋಲೆಟ್​ಗೂ ಜಿಎಸ್​ಟಿ ಹಾಕಿ ಜನಸಾಮಾನ್ಯರ ಮೇಲೆ ಎಳೆದಿದೆ ಎಂದು ಸಂಸದ ಡಿ.ಕೆ. ಸುರೇಶ್​ ಆರೋಪಿಸಿದರು.

ಕೈಲಾಂಚ ಗ್ರಾಮದ ಬಸವೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಎಚ್​.ಎ.ಇಕ್ಬಾಲ್​ ಹುಸೇನ್​ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಬಿಜೆಪಿಯವರು ಮತಯಾಚನೆಗೆ ಬಂದಿದ್ದಾರೆ. ಅವರು ಹೆಣ್ಣು ಮಕ್ಕಳ ಅಡುಗೆ ಮನೆಗೆ ಕೈಹಾಕಿದ್ದಾರೆ. ಚನ್ನಪಟ್ಟಣಕ್ಕೆ ಮೋದಿ ಬಂದು 500 ರೂ. ಕೊಟ್ಟು ಅಚ್ಚೇ ದಿನ್​ ಆಯಾ ಎಂದು ಕೈಬೀಸಿ ವಾಪಸ್​ ಹೋದರು. ಬ್ಯಾಂಕ್​ ಖಾತೆ, ಆಧಾರ್​ ಕಾರ್ಡ್​ ಈಗ ಪಾನ್​ ಕಾರ್ಡ್​ ಲಿಂಕ್​ಗೆ 1200 ರೂ. ಉಂಡೆನಾಮ ಹಾಕಿ ಹಾಗೂ ಪಾನ್​ ಕಾರ್ಡ್​ನಿಂದ ಬಡವರ ವ್ಯವಹಾರಗಳನ್ನು ತಿಳಿದು ಹೊಸ ತೆರಿಗೆ ಹಾಕುವುದೇ ಅವರ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ಜೆಡಿಎಸ್​ ಪಕ್ಷ ಅಭಿವೃದ್ಧಿ ಮರೆತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ಷೇತ್ರದ ಜನರಿಗೆ ಮನೆ ಮತ್ತು ನಿವೇಶನ ಇಲ್ಲದವರಿಗೆ ಸಹಾಯ ಮಾಡಬಹುದಿತ್ತು. ಆದರೆ ಮನಸ್ಸು ಮಾಡಲಿಲ್ಲ. ಚುನಾವಣಾ ಸಂದರ್ಭದಲ್ಲಿ ಪಂಚರತ್ನ ಯೋಜನೆ ಜಾರಿಗೆ ತರುತ್ತೇವೆ ಎನ್ನುತ್ತಿದ್ದಾರೆ ಎಂದು ಜೆಡಿಎಸ್​ ಬಗ್ಗೆ ಡಿ.ಕೆ. ಸುರೇಶ್​ ವಾಗ್ದಾಳಿ ನಡೆಸಿದರು.

ವಿಧಾನಪರಿಷತ್​ ಸದಸ್ಯರಾದ ಸಿ.ಎಂ. ಲಿಂಗಪ್ಪ, ಎಸ್​.ರವಿ, ಮಾಜಿ ಶಾಸಕ ಕೆ. ರಾಜು, ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವಿ.ಎಚ್​. ರಾಜು, ಕೆಎಸ್​ಐಸಿ ಮಾಜಿ ಅಧ್ಯಕ್ಷ ಹಾಜಿ ಸೈಯದ್​ ಜಿಯಾವುಲ್ಲಾ, ಕೆಎಂಎಫ್​ ಮಾಜಿ ಅಧ್ಯಕ್ಷ ಪಿ. ನಾಗರಾಜು ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net