ಮಾಗಡಿ: ತಾಲೋಕಿನ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ಪಸಂದ್ರ ಕೆರೆಯಲ್ಲಿ ಪುರುಷನ ಶವಪತ್ತೆಯಾಗಿದೆ.
ತಾಲೋಕಿನ ಅಡಲಿಂಗಯ್ಯನ ಪಾಳ್ಯ ಗ್ರಾಮದ ನಿವಾಸಿ ರಾಮಚಂದ್ರ(55) ಕೆರೆಯಲ್ಲಿ ಪತ್ತೆಯಾದ ಮೃತವ್ಯಕ್ತಿ
ಬೆಂಗಳೂರಿನಲ್ಲಿ ವಾಸವಿದ್ದ ರಾಮಚಂದ್ರ ಮಂಗಳವಾರ ತನ್ನ ಬೈಕ್ ಮೂಲಕ ಮನೆಯಿಂದ ತೆರಳಿದ್ದು ನಂತರ ನಾಪತ್ತೆಯಾಗಿದ್ದರು. ಆದರೆ, ಅಡಲಿಂಗಯ್ಯನ ಪಾಳ್ಯ ಗ್ರಾಮದ ಸಮೀಪ ಇರುವ ತಿಪ್ಪಸಂದ್ರ ಕೆರೆಯಲ್ಲಿ ಗುರುವಾರ ಶವ ಪತ್ತೆಯಾಗಿದೆ.
ಘಟನೆ ತಿಳಿದ ಕುದೂರು ಪೊಲೀಸರು ಕೆರೆಯಲ್ಲಿ ತೇಲುತ್ತಿದ್ದ ಶವವನ್ನು ಮೇಲಕ್ಕೆತ್ತಿ ನೆಲಮಂಗಲ ಸರಕಾರಿ ಆಸ್ಪತ್ರೆ ಯಲ್ಲಿ ಮರಣೊತ್ತರ ಪರೀಕ್ಷೆ ಗೆ ರವಾನಿಸಿದ್ದಾರೆ.