ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಪರಿಶೀಲಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

14-07-rama-Health dc meeting
Published on

ರಾಮನಗರ

ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಪ್ರಮುಖವಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಘಟಕದ (ಕಾಮನ್ ಬಯೋಮೆಡಿಕಲ್ ವೇಸ್ಟ್ ಟ್ರೀಟ್‌ಮೆಂಟ್ ೆಸಿಲಿಟಿ - ಸಿಬಿಎಂಡಬ್ಲ್ಯುಟಿಎಫ್)ಕಟ್ಟಡವನ್ನು ಅತಿ ಶೀಘ್ರದಲ್ಲಿ ಪರಿಸರ ಮಾಲಿನ್ಯ ಆಧಿಕಾರಿಗಳು ಪರಿಶೀಲಿಸಿ, ದೃಢೀಕರಿಸಿ ಚಾಲನೆಗೊಳಿಸುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಜಿಲ್ಲಾ ಆರೋಗ್ಯ ಸಮಿತಿ ಸಭೆ ಎನ್‌ಆರ್‌ಸಿಪಿ ಅಂತರಇಲಾಖಾ ಸಮಿತಿ ವೈದ್ಯಕೀಯ ತ್ಯಾಜ್ಯ ನಿರ್ವಹಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ಸಂಗ್ರಹಣೆ, ವಿಂಗಡನೆ ಮತ್ತು ವಿಲೇವಾರಿಯನ್ನು ಸಮರ್ಪಕವಾಗಿ ಮಾಡಲು ಹಾಗೂ ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಪರಿಶೀಲಿಸುವಂತೆ ಸೂಚನೆ ನೀಡಿದರು.

ಜು.17ರಿಂದ ಆ. 2ರವರೆಗೆ ಜಿಲ್ಲೆಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನ ಹಮ್ಮಿಕೊಳ್ಳಲಾಗುತ್ತಿದ್ದು. ಮನೆ-ಮನೆ ಸಮೀಕ್ಷೆ ಮಾಡಿ ಸಮುದಾಯದಲ್ಲಿ ಆರೋಗ್ಯ ಸೇವಾ-ಸೌಲಭ್ಯದಿಂದ ವಂಚಿತರಾದವರಿಗೆ ವಿಶೇಷ ಪ್ರಯತ್ನದೊಂದಿಗೆ ಸೇವೆ ಒದಗಿಸುವುದು ಹಾಗೂ ದುರ್ಬಲ ಉದ್ದೇಶಿತ ಗುಂಪುಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರಚಾರ ಕೈಗೊಂಡು ಕ್ಷಯರೋಗ ಪ್ರಕರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಇದರ ಮುಖ್ಯಉದ್ದೇಶವಾಗಿದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡುವ ಮೂಲಕ ಆಂದೋಲನವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಡಿಎಚ್‌ಒ ಡಾ. ಕಾಂತರಾಜು, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ. ಪದ್ಮಾ, ಡಿಎಲ್‌ಒ ಡಾ. ಮಂಜುನಾಥ್, ಡಿಎಸ್‌ಒ ಡಾ.ಕಿರಣ್ ಶಂಕರ್, ಆರ್‌ಸಿಎಚ್‌ಒ ಡಾ. ರಾಜು, ಡಿಟಿಒ ಡಾ. ಕುಮಾರ್, ಡಾ. ಆದರ್ಶ್ ಮುಂತಾದವರು ಇದ್ದರು.

ತಾಯಿ ಮಕ್ಕಳ ಆರೈಕೆ, ಲಸಿಕೆ ಬಗ್ಗೆ ಅರಿವು ಮೂಡಿಸಿ

ಜಿಲ್ಲಾ ವ್ಯಾಪ್ತಿಯಲ್ಲಿ ಏಪ್ರಿಲ್‌ನಿಂದ ಜೂನ್‌ವರೆಗೆ ಯಾವುದೇ ತಾಯಿ ಮರಣ ಸಂಭವಿಸಿರುವುದಿಲ್ಲ. 0-5 ವರ್ಷದೊಳಗಿನ ಮಕ್ಕಳು ಮರಣಹೊಂದಿದ್ದು ಮಕ್ಕಳ ಮರಣಕ್ಕೆ ಸಂಬಂಧಿಸಿದಂತೆ ವರದಿಗಳನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಪ್ರಕರಣಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಲು ಸೂಚಿಸಿದರು. ಇಲಾಖೆ ವತಿಯಿಂದ ನಿರಂತರವಾಗಿ ಅರಿವು ಕಾರ್ಯಕ್ರಮಗಳನ್ನು ಮಾಡುತ್ತಿದ್ದೀರಿ. ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ / ಉಪಕೇಂದ್ರದ ಮಟ್ಟದಲ್ಲಿ ತಾಯಿ ಮಕ್ಕಳ ಆರೋಗ್ಯ ಸೇವೆ, ಎದೆ ಹಾಲಿನ ಮಹತ್ವ ಮಗು ಮತ್ತು ತಾಯಿಯ ಆರೈಕೆ, ಲಸಿಕೆಗಳ ಮಹತ್ವ ಇನ್ನಿತರ ಸೇವಾ-ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವಂತೆ ಅವಿನಾಶ್ ಮೆನ್ ರಾಜೇಂದ್ರನ್ ನಿರ್ದೇಶನ ನೀಡಿದರು.

ರೇಬಿಸ್ ನಿಯಂತ್ರಣಕ್ಕೆ ಕ್ರಮ

ರಾಷ್ಟ್ರೀಯ ರೇಬಿಸ್ ನಿಯಂತ್ರಣ ಕಾರ್ಯಕ್ರಮದಡಿ ನಾಯಿ ಕಡಿತದ ಸಂದರ್ಭದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮ, ಚಿಕಿತ್ಸೆ ಹಾಗೂ ರೇಬಿಸ್ ಬಗ್ಗೆ ಸಾರ್ವಜನಿಕರಲಿ ್ಲಅರಿವು ಮೂಡಿಸಬೇಕು. ನಗರಸಭೆ, ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ಪಶುಸಂಗೋಪನ ಇಲಾಖೆ ಸಹಯೋಗದೊಂದಿಗೆ ಸಮನ್ವಯ ಸಾಧಿಸಿ ನಾಯಿಗಳ ಸಂತತಿ ನಿಯಂತ್ರಣ ಮಾಡಬೇಕು ಎಂದು ತಿಳಿಸಿದರು.

ಆರೈಕೆ ಕೇಂದ್ರ

ಮಾನಸಿಕ ರೋಗಿಗಳಿಗೆ ಚಿಕಿತ್ಸೆಯ ನಂತರ ಪುನರ್ವಸತಿ ಅವಶ್ಯಕತೆಯಿದ್ದು ಇದರ ಭಾಗವಾಗಿ ಜಿಲ್ಲಾ ಕೇಂದ್ರದಲ್ಲಿ ಉತ್ತಮ ಎನ್‌ಜಿಒ ಆಯ್ಕೆ ಮಾಡಿ ಅವರ ಸಹಯೋಗದೊಂದಿಗೆ ಹಗಲು ಆರೈಕೆ ಕೇಂದ್ರ ತೆರೆದು ಮಾನಸಿಕ ಚಿಕಿತ್ಸೆ ಪಡೆದು ಗುಣಮುಖರಾದವರಿಗೆ ವೃತ್ತಿಪರ ಕೌಶಲ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಮಾರ್ಗಸೂಚಿ ಅನ್ವಯ ಎನ್‌ಜಿಒ ಗುರುತಿಸಿ ಆರೈಕೆ ಕೇಂದ್ರ ತೆರೆಯುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net