ಒಂದು ತಪ್ಪಿಗೆ 41 ಲಕ್ಷ ರೂ. ದೋಖಾ! ಫೇಸ್‌ಬುಕ್ ಸ್ನೇಹದ ಪರಿಣಾಮ ಹಣ ಕಳೆದುಕೊಂಡ ವ್ಯಕ್ತಿ

Cyber Attack
Published on

ರಾಮನಗರ: ಒಂದು ಸಣ್ಣ ತಪ್ಪು ಬರೋಬ್ಬರಿ 41 ಲಕ್ಷ ರೂ.ಗಳನ್ನು ಕಳೆದುಕೊಳ್ಳುವಂತೆ ಮಾಡಿದೆ.
ಫೇಸ್‌ಬುಕ್‌ನಲ್ಲಿ ಅಪರಿಚಿತ ವ್ಯಕ್ತಿಯೊಂದಿಗೆ ಮಾಡಿಕೊಂಡ ಸ್ನೇಹ, ಆ ವ್ಯಕ್ತಿಯನ್ನು ಹಣ ಕಳೆದುಕೊಳ್ಳುವಂತೆ ಮಾಡಿದ್ದು, ಇದೀಗ ಮೋಸ ಹೋಗಿರುವ ವ್ಯಕ್ತಿ ರಾಮನಗರದ ಸೆನ್ ಠಾಣೆಗೆ ದೂರು ನೀಡಿದ್ದಾರೆ.


ಬೆಂಗಳೂರು ದಕ್ಷಿಣ ತಾಲೂಕಿನ ರಸ್ತೆ ಜಕ್ಕಸಂದ್ರದ ವ್ಯಕ್ತಿಯೊಬ್ಬರು ಗೀತಾ ಸೆಕ್ಸಿ ಎನ್ನುವ ಫೇಸ್‌ಬುಕ್ ಅಕೌಂಟ್‌ನೊಂದಿಗೆ ಸ್ನೇಹ ಬೆಳೆಸಿದ್ದಾರೆ. ನಂತರ ಮೆಸೆಂಜರ್‌ನಲ್ಲಿ ಒಂದಿಷ್ಟು ಹುಡುಗಿಯರ ಫೋಟೋ ಸೆಲೆಕ್ಟ್ ಮಾಡು, ಅವರನ್ನು ಕನಕಪುರಕ್ಕೆ ಕಳುಹಿಸುತ್ತೇನೆ ಎಂದು ಹೇಳಿದ್ದಾರೆ.

ದೂರುದಾರನ ಫೋಟೋ, ವಿಳಾಸ ಹಾಗೂ 800 ರೂ.ಗಳನ್ನು ಪಡೆದುಕೊಂಡಿದ್ದಾರೆ. ಆದರೆ, ಇದೇ ಫೋಟೋ ಇಟ್ಟುಕೊಂಡು ಅವಹೇಳನಕಾರಿ ರೀತಿಯಲ್ಲಿ ಆತನ ಫೋಟೋಗಳನ್ನು ಎಡಿಟ್ ಮಾಡಿ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇವೆ ಎಂದು ಹೆದರಿಸಿ ಕಳೆದ 6 ತಿಂಗಳಿಂದ ಸುಮಾರು 41 ಲಕ್ಷ ರೂ.ಗಳನ್ನು ವಸೂಲಿ ಮಾಡಿಕೊಂಡಿದ್ದಾರೆ. ಮರ್ಯಾದೆಗೆ ಅಂಜಿ ಹಣ ನೀಡುತ್ತಲೇ ಬಂದಿದ್ದ ವ್ಯಕ್ತಿ, ಇದೀಗ ಬೇಸತ್ತು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net