ಆಸ್ಪತ್ರೆಯಲ್ಲಿ ಆಕಸ್ಮಿಕವಾಗಿ ಬಿಟ್ಟು ಹೋಗಿದ್ದ ವೃದ್ಧೆಯ ಚಿನ್ನದ ಸರ ಹಿಂದಿರುಗಿಸಿದ ಯುವಕನಿಗೆ ಎಸ್‌ಪಿ ಪ್ರಶಂಸೆ!

24-08-rama-poice
Published on

ರಾಮನಗರ: ಆಕಸ್ಮಿಕವಾಗಿ ಬಿಟ್ಟು ಹೋಗಿದ್ದ ವೃದ್ಧೆಯ ಚಿನ್ನದ ಸರವನ್ನು ಹಿಂದಿರುಗಿಸಿದ ಯುವಕ ಹರ್ಷವರ್ಧನ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಸಂತೋಷ್ ಬಾಬು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

ಆ.14ರಂದು ಜಯಲಕ್ಷ್ಮಮ್ಮ ಎನ್ನುವರು ಆರೋಗ್ಯ ಸಮಸ್ಯೆಯ ಕಾರಣದಿಂದ ಚನ್ನಪಟ್ಟಣದ ಪುಣ್ಯ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಜಯ ಲಕ್ಷ್ಮಮ್ಮ ಅವರ 45 ಗ್ರಾಂ ಚಿನ್ನದ ಸರವನ್ನು ಆಸ್ಪತ್ರೆಯಲ್ಲಿ ಆಕಸ್ಮಿಕವಾಗಿ ಬಿಟ್ಟು ಹೋಗಿರುತ್ತಾರೆ. ಆದೇ ದಿನ ರಾತ್ರಿ ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳಿದ್ದ ಹರ್ಷವರ್ಧನ್ ರವರಿಗೆ ಚಿನ್ನದ ಸರವು ಸಿಕ್ಕಿದೆ. ತಕ್ಷಣವೇ ಆಸ್ಪತ್ರೆಯ ಆಡಳಿತ ಮಂಡಳಿಯ ಗಮನಕ್ಕೆ ತಂದು ಆ.15ರಂದು ಚನ್ನಪಟ್ಟಣ ಪುರ ಪೋಲಿಸ್‌ಗೆ ಠಾಣೆಗೆ ಹಿಂದಿರುಗಿಸಿದ್ದಾರೆ. ಈ ವೇಳೆ ದಾಖಲೆಗಳನ್ನು ಪರಿಶೀಲಿಸಿ ಜಯಲಕ್ಷ್ಮಮ್ಮ ಅವರಿಗೆ ಪೊಲೀಸ್ ಅಧಿಕಾರಿಗಳ ಮುಖಾಂತರ ಹಿಂದಿರುಗಿಸಲಾಗಿದೆ.

ಹರ್ಷವರ್ಧನ್‌ರವರ ಈ ನಿಸ್ವಾರ್ಥ ಕಾರ್ಯವನ್ನು ರಾಮನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ಸಂತೋಷ್ ಬಾಬು ಶ್ಲಾಘಿಸಿ ಪ್ರಶಂಸನಾ ಪತ್ರವನ್ನು ನೀಡಿ ಅಭಿನಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net