ಆಸ್ತಿಗಾಗಿ ತಾಯಿ ಕೊಂದವನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ರಾಮನಗರ: ಆಸ್ತಿ ವಿಚಾರವಾಗಿ ತಾಯಿಯನ್ನು ಕೊಂದು ಮನೆ ಹಿಂದೆ ಪಿಟ್ ನಲ್ಲಿ ಹೂತು ಹಾಕಿದ್ದ ಮಗನಿಗೆ ರಾಮನಗರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂ ದಂಡ ವಿಧಿಸಿದೆ.

ಚನ್ನಪಟ್ಟಣ ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗವಾರ ಗ್ರಾಮದ ಸುರೇಶ್ ಶಿಕ್ಷೆಗೆ ಒಳಗಾದವರು. ನಾಗಮ್ಮ (70) ತನ್ನ ಮನನಿಂದಲೇ ಕೊಲೆಯಾದ ನತದೃಷ್ಠ ಮಹಿಳೆ.

ತನ್ನ ತಾಯಿ ಹೆಸರಲ್ಲಿ ಇದ್ದ ಜಮೀನನ್ನು ತನಗೆ ಬರೆದುಕೊಡುವಂತೆ ಒತ್ತಾಯಿಸುತ್ತಿದ್ದ ಸುರೇಶ್,  ತನ್ನ ತಾಯಿಯನ್ನು ಕೊಲೆ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಮನೆ ಹಿಂದಿನ ಪಿಟ್ ನಲ್ಲಿ ಹಾಕಿದ್ದ.

ಈ ಸಂಬಂಧ ಕೊಲೆಯಾದ ನಾಗಮ್ಮ ಪುತ್ರಿ ಲಕ್ಷ್ಮೀ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿ, ತನ್ನ ಅಣ್ಣ ಸುರೇಶ್ ಮೇನೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಸಿಪಿಐ ಎ.ಪಿ.ಕುಮಾರ್, ಎಸ್ಐ ಶಿವಕುಮಾರ್ ನೇತೃತ್ವದ ತಂಡ ಪ್ರಕರಣವನ್ನು ಬೇದಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದರು. ಈ ಸಂಬಂಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ರಾಮನಗರ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ದೇವರಾಜ್ ಭಟ್ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂ ದಂಡ ವಿಧಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರಿ ವಕೀಲರಾಗಿ ತಮ್ಮಣ್ಣ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net