

ರಾಮನಗರ: ಕುಳಿತಿದ್ದ ಕಡೆಯೇ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆವರದಲ್ಲಿ ನಡೆದಿದೆ.
ಮಧು(36)ಮೃತಪಟ್ಟ ಕೋರ್ಟ್ ಸಿಬ್ಬಂದಿ.
ನಗರದ ಜಿಲ್ಲಾಮತ್ತು ಸತ್ರ ನ್ಯಾಯಲಯ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ಮಧು ಕುಳಿತಲ್ಲಿಯೇ ಮೃತಪಟ್ಟಿದ್ದಾರೆ. ಮಧು ಕನಕಪುರ ತಾಲೂಕಿನ ಬೂದಗುಪ್ಪೆ ಗ್ರಾಮದವರು.
ಕಳೆದ ರಾತ್ರಿ 9 ಗಂಟೆಗೆ ಕುಟುಂಬಕ್ಕೆ ಕರೆ ಮಾಡಿದ್ದು, ಬೆಳಿಗ್ಗೆ ವೇಳೆಗೆ ಮೃತಪಟ್ಟಿದ್ದಾರೆ. ಹೃದಯಘಾತ ಆಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಐಜೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.