

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ತಾಲೂಕಿನ ವಿವಿಧೆಡೆ ತೆಂಗಿನ ತೋಟಗಳಲ್ಲಿ ಕಂಡುಬರುವ ಕೆಂಪು ಮೂತಿ ಹುಳುವಿನ ಬಾಧೆಯಿಂದಾಗಿ ಮರಗಳು ಕಾಂಡ ಸೋರುವ ರೋಗಕ್ಕೆ ತುತ್ತಾಗುತ್ತಿವೆ.
ಮಳೆ ಹೆಚ್ಚಾದ ಕಾರಣ, ತೋಟದಲ್ಲಿ ನೀರು ನಿಲ್ಲುವುದು, ಅತಿಯಾದ ಉಷ್ಣತೆಯ ಕಾರಣದಿಂದಲೂ ರೋಗ ಕಾಣಿಸಿಕೊಂಡಿದೆ.
ಪ್ರಾರಂಭಿಕ ಹಂತದಲ್ಲಿಯೇ ರೈತರು ತೋಟಗಾರಿಕೆ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದು ಔಷಧ ಸಿಂಪಡಿಸಿದರೆ ರೋಗ ಹತೋಟಿಗೆ ಬರಲಿದೆ ಹಾಗೂ ಇತರ ತೋಟಗಳಿಗೆ ಹರಡುವುದನ್ನು ತಪ್ಪಿಸಬಹುದಾಗಿದೆ. ಔಷಧ ಸಿಂಪಡಣೆ ನಂತರ 45 ದಿನ ಎಳನೀರು, ಕಾಯಿ ಕೀಳುವಂತಿಲ್ಲ ಎನ್ನುತ್ತಾರೆ ತೋಟಗಾರಿಕೆ ಅಧಿಕಾರಿ ಮಹೇಶ್.
ನಿರ್ವಹಣೆ
ರೋಗಕ್ಕೆ ತುತ್ತಾದ ಭಾಗವನ್ನು ಹರಿತವಾದ ಬಾಚಿಯಿಂದ ಕೆತ್ತಿ ಅದನ್ನು ನೀರಿನಿಂದ ತೊಳೆದು ನಂತರ ಶೇ. 1 ರ ಬೋರ್ಡೊ ದ್ರಾವಣ ಲೇಪಿಸಬೇಕು ಅಥವಾ ಶೇ.5ರ 5 ಮಿ.ಲೀ. ಹೆಕ್ಸೊಕೊನಜೋಲ್ 100 ಮಿ.ಲೀ. ನೀರಿನಲ್ಲಿ ಬೆರೆಸಿದ ದ್ರಾವಣವನ್ನು ಕೆತ್ತಿದ ಭಾಗಕ್ಕೆ ಸವರಬೇಕು. ಅಥವಾ ಬೇರು ಮೂಲಕ ಮೋನೋಕ್ರೋಟೋಫಾಸ್ 10 ಎಂ.ಎಲ್. ಔಷಧವನ್ನು 50 ಎಂ.ಎಲ್. ನೀರಿನಲ್ಲಿ ಬೆರೆಸಿ ಬೇರಿನ ಮೂಲಕ ಉಪಚರಿಸಬೇಕು. ಪ್ರತಿ ಗಿಡಕ್ಕೆ 5 ಕಿ.ಗ್ರಾಂ.ನಂತೆ ಬೇವಿನ ಹಿಂಡಿಯನ್ನು ಮಡಿಗಳಲ್ಲಿ ಸೇರಿಸಬೇಕು. ತೋಟಗಳಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ವ್ಯವಸ್ಥೆ ವಾಡಬೇಕು. ರಂಧ್ರ ಕೊರೆಯುವ ಕೀಟಗಳನ್ನು ಹತೋಟಿ ವಾಡಲು ಶೇ.50ರ ಕ್ಲೋರೋಪೈರಿಫಾಸ್ ಲೇಪಿಸಬೇಕು. ಆಗ ಕಾಂಡ ಬಾಧಿಸುವ ಹುಳು ನಿಯಂತ್ರಣ ವಾಡಬಹುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಬಾಧೆ?
ಕಸಬಾ ಹೋಬಳಿಯ ಅರ್ಚಕರಹಳ್ಳಿ, ರಂಗರಾಯರದೊಡ್ಡಿ ಬಿಡದಿ ಹೋಬಳಿಯ ಗೋಪಳ್ಳಿ ಭಾಗ, ಕೂಟಗಲ್ ಹೋಬಳಿಯ ಮೇಳೇಹಳ್ಳಿ, ಅಂಕನಹಳ್ಳಿ, ಕೂಟಗಲ್, ಕೈಲಾಂಚ ಹೋಬಳಿಯ ಕಾಡನಕುಪ್ಪೆ, ಹೊಸದೊಡ್ಡಿ, ಅಚ್ಚಲು ಮತ್ತಿತರ ಭಾಗಗಳಲ್ಲಿ ತೆಂಗಿನ ತೋಟಗಳಲ್ಲಿ ಕಾಂಡ ಸೋರುವ ರೋಗ ಕಾಣಿಸಿಕೊಂಡಿದೆ.
ರೋಗ ಲಕ್ಷಣ
ನೆಲದಿಂದ 56 ಅಡಿ ಎತ್ತರದ ಕಾಂಡಗಳಲ್ಲಿ ಕಂದು ಬಣ್ಣದ ತೇಪೆ ಕಂಡು ಬರುತ್ತದೆ. ಕುಳಿಯುಂಟಾಗಿ ಬಿರುಕು ಬಿಟ್ಟು ಅಂಟು ದ್ರವ ಹೊರ ಬರುತ್ತದೆ. ಹೀಗೆ ಒಂದರ ಮೇಲೆ ಒಂದರಂತೆ ಕಾಂಡದ ಸುತ್ತಲೂ ಕುಳಿಗಳು ಉಂಟಾಗಿ ಕೀಟಬಾಧೆ ಹೆಚ್ಚುತ್ತದೆ. ದಿನೇದಿನೆ ಮರ ಶಕ್ತಿ ಕಳೆದುಕೊಳ್ಳುತ್ತದೆ. ಕಾಯಿಗಳು ಉದುರಿ ಹೋಗಿ ಫಸಲು ಕಾಣದೆ ಮರದ ಒಂದೊಂದೇ ಭಾಗ ಒಣಗಲು ಪ್ರಾರಂಭವಾಗುತ್ತದೆ. ಮೊದಲು ಸುಳಿ, ಗರಿಗಳು ಒಣಗುತ್ತವೆ. ನಂತರ ಮರ ಸಾಯುತ್ತದೆ.
ರೋಗಪೀಡಿತ ತೋಟಗಳಿಗೆ ಭೇಟಿ ನೀಡಿ ಔಷಧೋಪಚಾರದ ಬಗ್ಗೆ ರೈತರಿಗೆ ವಾಹಿತಿ ನೀಡಲಾಗಿದೆ. ರೋಗ ತೋಟದಿಂದ ತೋಟಕ್ಕೆ ಬಹುಬೇಗನೆ ಹರಡುವುದಿಲ್ಲ. ಪ್ರಾರಂಭಿಕ ಹಂತದಲ್ಲಿಯೇ ಸರಿಯಾದ ಔಷಧ ಕ್ರಮದಿಂದ ರೋಗ ಹತೋಟಿ ವಾಡಬಹುದು.
ಎಚ್.ಎಸ್.ಶಂಕರ್, ಸಹಾಯಕ ನಿರ್ದೇಶಕ, ತೋಟಗಾರಿಕಾ ಇಲಾಖೆ, ರಾಮನಗರ
ಕಳೆದ ತಿಂಗಳಿಂದ ಒಂದೊಂದೇ ಮರದಲ್ಲಿ ಕಾಂಡ ಸೋರುವ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಫಸಲು ಕುಂಠಿತವಾಗಿ ಗರಿಗಳು ಬಲಹೀನವಾಗುತ್ತಿವೆ. ಅಧಿಕಾರಿಗಳ ನಿರ್ದೇಶನದಂತೆ ಬೇವಿನಹಿಂಡಿ, ಔಷಧ ಸಿಂಪಡಣೆ ವಾಡಲಾಗಿದೆ. ಔಷಧ ಪರಿಣಾಮಕಾರಿಯಾಗಿ ಕೆಲಸ ವಾಡಿದರೆ ರೋಗದಿಂದ ಮುಕ್ತಿ ಕಾಣಬಹುದು ಅಷ್ಟೇ.
ಲಿಂಗಯ್ಯ, ಹೊಸದೊಡ್ಡಿ