ನಗರಸಭೆ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ

WhatsApp Image 2022-09-05 at 3.34.42 PM
Published on

ರಾಮನಗರ: ನಗರದಲ್ಲಿ ಪ್ರವಾಹ ಸಂಭವಿಸಿದ್ದು ನಾಗರೀಕರ ಬದುಕು‌ದುಸ್ತರವಾಗಿದೆ ಆದರೆ ಸಂಬಂಧಿಸಿದ ನಗರಸಭೆಯ ಅಧಿಕಾರಿಗಳು ಸ್ವಚ್ಚತಾ‌ಕಾರ್ಯ ಚುರುಕುಗೊಳಿಸುತ್ತಿಲ್ಲ ದೊಡ್ಡವರು ಬಂದಾಗ ಫೋಟೋಗಷ್ಟೇ ಸೀಮಿತವಾಗಿದ್ದಾರೆ ನಮ್ಮ ವಾರ್ಡ್ ಗಳು ಗಬ್ಬು ನಾರುತ್ತಿವೆ ಎಂದು ಆರೋಪಿಸಿ ನಗರಸಭೆಯ ಸದಸ್ಯರು ಒಕ್ಕೋರಲಲ್ಲಿ‌ ನಗರವಾಸಿಗಳ ಜೊತೆಗೂಡಿ ನಗರಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.‌

ನಂತರ ನಗರಸಭೆಯ ಮೀಟಿಂಗ್ ಹಾಲ್‌ನಲ್ಲಿ ಸಂಧಾನ ಸಭೆಯಲ್ಲಿ ಸಮಸ್ತೆಗಳ‌ ಮಹಾಪೂರವನ್ನೇ ಹರಿಸಿದ ಸಾರ್ವಜನಿಕರು ಮತ್ತು ನಗರಸಭೆ ಸದಸ್ಯರು ಕಸದ ರಾಶಿ ಹೆಚ್ಷಾಗಿದ್ದು ಎತ್ತುತ್ತಿಲ್ಲ‌ನೀರು‌ ಸರಭರಾಜು ಮಾಡ್ತಿಲ್ಲ ಕ್ಲೀನಿಂಗ್ ಕಾಮಗಾರಿ‌ ವಿಳಂಬ ಮಾಡ್ತಿದ್ದಾರೆ ನಗರ ವಾಸನೆ ಹೆಚ್ಚಾಗುತ್ತಿದೆ . ಸಂಘ ಸಂಸ್ಥೆಗಳು ಬರದೇ ಇದ್ದಿದ್ದರೆ ನಾವು ಬದುಕುವುದೇ ಕಷ್ಟಕರವಾಗಿತ್ತು ಸಂಘ ಸಂಸ್ಥೆಗಳು ನಮಗೆ ಜೀವ ನೀಡ್ತಿವೆ ನಗರಸಭೆ ಅಧಿಕಾರಿ ಆರೋಗ್ಯ ಶಾಖೆ ಎಇಇ ಸುಭ್ರಮಣ್ಯಗೆ ತರಾಟೆಗೆ ತೆಗೆದುಕೊಂಡ ಸದಸ್ಯರು ಅಧಿಕಾರಿಗಳು ಅಧ್ಯಕ್ಷರು ಫೋಟೋಗೆ ಸೀಮಿತವಾಗಿದ್ದಾರೆ ಎಂದು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಹಾಗೂ ಅಧ್ಯಕ್ಷರಿಗೆ ಮುತ್ತಿಗೆ ಹಾಕಿದ ಸದಸ್ಯರು‌ ತ್ವರಿತವಾಗಿ ಸ್ವಚ್ಚತಾ‌ಕಾರ್ಯ ಆರಂಬಿಸಬೇಕು ಎರಡು ಮೂರು ದಿನದಲ್ಲಿ ಸ್ವಚ್ಚತೆ ಹಾಗೂ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net