ರಾಮನಗರ ನಗರಸಭೆ ಅಧ್ಯಕ್ಷೆ ಪವಿತ್ರ ರಾಜೀನಾಮೆ

IMG-20230711-WA0084.jpg
Published on

ರಾಮನಗರ: ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪವಿತ್ರ ಲಕ್ಷ್ಮೀಪತಿ ರಾಜೀನಾಮೆ ನೀಡಿದ್ದಾರೆ.

ಈಗ ಮತ್ತೊಬ್ಬರಿಗೆ ಅಧಿಕಾರ ಬಿಟ್ಟುಕೊಡುವ ಸಲುವಾಗಿ ಪಕ್ಷದ ನಾಯಕರ ಸೂಚನೆಯಂತೆ ಮಂಗಳವಾರ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರಿಗೆ ಪವಿತ್ರ ರಾಜೀನಾಮೆ ಸಲ್ಲಿಸಿದರು. ಪಕ್ಷದಲ್ಲಿನ ಅಧಿಕಾರ ಹಂಚಿಕೆ ಸೂತ್ರದಂತೆ ಪವಿತ್ರ ಅವರು ಪಾರ್ವತಮ್ಮ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 31ನೇ ವಾರ್ಡ್ ನ ಸದಸ್ಯೆ ವಿಜಯಲಕ್ಷ್ಮೀ ಬಹುತೇಕ ಅದ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ.

ಪವಿತ್ರ ರಾಜೀನಾಮೆ ವೇಳೆ ಉಪಾಧ್ಯಕ್ಷ ಸೋಮಶೇಖರ್ , ಮುಂಡರಾದ ಶಿವಕುಮಾರಸ್ವಾಮಿ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net